ಕರ್ನಾಟಕ

karnataka

ETV Bharat / bharat

ಬರಿಗಾಲಲ್ಲೇ ಕ್ರೀಡಾಭ್ಯಾಸ ಮಾಡಿ ಕಂಚು ಗೆದ್ದ ಪ್ಯಾರಾಅಥ್ಲೀಟ್​​​ ಈಗ ಐಸ್‌ಕ್ರೀಂ​ ಮಾರಾಟಗಾರ!

ನ್ಯಾಷನಲ್​ ಚಾಂಪಿಯನ್​ಶಿಪ್​ನಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿರುವ ಪ್ಯಾರಾ ಅಥ್ಲೀಟ್​​ ಜೀವನೋಪಾಯಕ್ಕಾಗಿ ಐಸ್​ ಕ್ರೀಂ ಮಾರಾಟ ಮಾಡುತ್ತಿದ್ದಾರೆ.

Para Athlete Sells Ice Cream
Para Athlete Sells Ice Cream

By

Published : May 6, 2022, 9:59 AM IST

ಭೋಪಾಲ್​(ಮಧ್ಯಪ್ರದೇಶ):ರಾಷ್ಟ್ರೀಯ ಚಾಂಪಿಯನ್​ಶಿಪ್​​ನಲ್ಲಿ ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಅಥ್ಲೀಟ್‌ವೊಬ್ಬರು ಜೀವನದ ಬಂಡಿ ಸಾಗಿಸಲು ಐಸ್‌ಕ್ರೀಂ​​ ಮಾರಾಟ ಮಾಡ್ತಿದ್ದಾರೆ. ಇದರಿಂದ ಬರುವ ಆದಾಯದಿಂದ ಮನೆಯ ಖರ್ಚುವೆಚ್ಚವನ್ನು ನಿಭಾಯಿಸುತ್ತಿದ್ದಾರೆ.

21 ವರ್ಷದ ಸಚಿನ್ ಸಾಹು ಪ್ಯಾರಾ ಅಥ್ಲೀಟ್​​ ಆಗಿದ್ದು, ಮಧ್ಯಪ್ರದೇಶದ ರೇವಾದಲ್ಲಿ ವಾಸವಿದ್ದಾರೆ. ಕ್ರೀಡಾಭ್ಯಾಸ ಮಾಡಲು ಶೂ ಇಲ್ಲದ ಕಾರಣಕ್ಕೆ ಬರಿಗಾಲಿನಲ್ಲೇ ಓಡಿ ರಾಷ್ಟ್ರೀಯ ಚಾಂಪಿಯನ್​​ಶಿಪ್​​ನಲ್ಲಿ ಎರಡು ಕಂಚಿನ ಪದಕವನ್ನು ಇವರು ಮುಡಿಗೇರಿಸಿಕೊಂಡಿದ್ದರು.

​​

2015ರಿಂದ 2019ರವರೆಗೆ ಕ್ರಿಕೆಟ್​ ಆಡಿರುವ ಸಚಿನ್ ಸಾಹು ದಿವ್ಯಾಂಗನಾಗಿದ್ದ ಕಾರಣ ಹೆಚ್ಚಿನ ಸಾಧನೆ ಸಾಧ್ಯವಾಗಲಿಲ್ಲ. ತದನಂತರ ಗ್ವಾಲಿಯರ್​ನ ಅಥ್ಲೆಟಿಕ್ಸ್​ ಕೋಚ್​ ಬಿ.ಕೆ.ಧವನ್​ ಅವರನ್ನು ಸಂಪರ್ಕಿಸಿ ತರಬೇತಿ ಪಡೆದುಕೊಂಡರು. ಸತತ ತರಬೇತಿ ಹಾಗೂ ಪ್ರಯತ್ನದ ಫಲವಾಗಿ ಸಚಿನ್​, 2020ರ ನ್ಯಾಷನಲ್​ ಚಾಂಪಿಯನ್​ಶಿಪ್​ಗೆ ಅರ್ಹತೆ ಗಿಟ್ಟಿಸಿಕೊಂಡರು. ಆದರೆ, ಕೋವಿಡ್​ನಿಂದಾಗಿ ಸ್ಪರ್ಧೆ ಸ್ಥಗಿತಗೊಂಡಿತು. 2021ರಲ್ಲಿ ನಡೆದ ಸ್ಪರ್ಧೆಯಲ್ಲಿ 100 ಮೀಟರ್ ಓಟದಲ್ಲಿ 4ನೇ ಸ್ಥಾನ ಪಡೆದರು. ಒಡಿಶಾದ ಭುವನೇಶ್ವರದಲ್ಲಿ ನಡೆದ 20ನೇ ರಾಷ್ಟ್ರೀಯ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​ನಲ್ಲಿ ಇವರ ಪರಿಶ್ರಮಕ್ಕೆ ಎರಡು ಕಂಚಿನ ಪದಕ ಒಲಿದುಬಂತು.

ಇದನ್ನೂ ಓದಿ:IPLನಲ್ಲಿಂದು ಗುಜರಾತ್​ ಸವಾಲು ಎದುರಿಸಲಿದೆ ಮುಂಬೈ: ಅರ್ಜುನ್​ ತೆಂಡೂಲ್ಕರ್​ಗೆ ಚಾನ್ಸ್?

ಕೋವಿಡ್​ನಿಂದಾಗಿ ಸಚಿನ್‌ ಸಾಹುಗೆ ಯಾವುದೇ ಸ್ಪರ್ಧೆಗಳಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಸದ್ಯಕ್ಕೆ ಐಸ್‌ಕ್ರೀಂ​​ ಮಾರುವ ಕೆಲಸ ಮಾಡ್ತಿದ್ದಾರೆ. ಇವರಿಗೆ ನಾಲ್ವರು ಸಹೋದರಿಯರು, ಇಬ್ಬರು ಸಹೋದರರಿದ್ದಾರೆ.

ABOUT THE AUTHOR

...view details