ಕರ್ನಾಟಕ

karnataka

ETV Bharat / bharat

49 weds 18: ಮಗಳ ವಯಸ್ಸಿನ ಹುಡುಗಿ ಜೊತೆ ವಿವಾಹವಾದ ಪಾಕಿಸ್ತಾನ ಸಂಸದ!! - ಮಗಳ ವಯಸ್ಸಿನ ಹುಡುಗಿ ಜೊತೆ ವಿವಾಹವಾದ ಪಾಕಿಸ್ತಾನ ಸಂಸದ

ಅಮೀರ್​ ಲಿಯಾಖತ್​ ಹುಸೈನ್​ ಮತ್ತು ಸಯೀದಾ ದಾನಿಯಾ ಶಾ ಬುಧವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅಮೀರ್​ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಇಬ್ಬರ ಮದುವೆ ಫೋಟೋ ಹಂಚಿಕೊಂಡು ವಿವಾಹದ ಸುದ್ದಿ ಬಹಿರಂಗಪಡಿಸಿದ್ದಾರೆ.

pakistan-mna-aamir
ಪಾಕಿಸ್ತಾನ ಸಂಸದ

By

Published : Feb 11, 2022, 8:33 PM IST

ಹೈದರಾಬಾದ್: ಕರ್ನಾಟಕ ಸೇರಿದಂತೆ ದೇಶದಲ್ಲಿ ಹಿಜಾಬ್​ ಬಗ್ಗೆ ಸಂಘರ್ಷ ಉಂಟಾದ ಸುದ್ದಿಯನ್ನು ಪಾಕಿಸ್ತಾನ ಟೀಕಿಸಿ, ಇದು ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ. ಇದನ್ನು ಭಾರತ ಸರ್ಕಾರ ತಡೆಯಬೇಕು ಎಂದು ಉಪದೇಶ ನೀಡಿದೆ. ಇದೀಗ ಅದೇ ದೇಶದಲ್ಲಿ ಆಡಳಿತಾರೂಢ ಪಕ್ಷದ ಸಂಸದರೊಬ್ಬರು ಮಗಳ ವಯಸ್ಸಿನ ಯುವತಿಯೊಂದಿಗೆ ವಿವಾಹವಾಗಿ ಸುದ್ದಿಯಾಗಿದ್ದಾರೆ.

ಆ ಮಹಾನ್​ ಸಂಸದನ ಹೆಸರು ಅಮೀರ್​ ಲಿಯಾಖತ್​ ಹುಸೈನ್​. ವಯಸ್ಸು ಕೇವಲ 49. ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತೆಹ್ರಿಕ್​ ಇ ಇನ್ಸಾಫ್​(ಪಿಟಿಐ) ಪಕ್ಷದ ಸಂಸದ. ಅಲ್ಲದೇ ಅಮೀರ್​ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕನೂ ಆಗಿದ್ದಾನೆ. ಸಂಸದ ಅಮೀರ್​ ಲಿಯಾಖತ್​ ಹುಸೈನ್​ 18 ವರ್ಷದ ಸಯೀದಾ ದಾನಿಯಾ ಶಾ ಎಂಬ ಯುವತಿ ಜೊತೆ ನಿಕಾ(ವಿವಾಹ) ಮುಗಿಸಿದ್ದಾನೆ. ಅದೂ ಸಂಸದರ 3 ನೇ ಮದುವೆ ಎಂಬುದು ವಿಶೇಷ.

ಸಂಸದ ಅಮೀರ್​ ಲಿಯಾಖತ್​ ಹುಸೈನ್​- ಸಯೀದಾ ದಾನಿಯಾ ಶಾ

ಅಮೀರ್​ ಲಿಯಾಖತ್​ ಹುಸೈನ್​ ಮತ್ತು ಸಯೀದಾ ದಾನಿಯಾ ಶಾ ಬುಧವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅಮೀರ್​ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಇಬ್ಬರ ಮದುವೆ ಫೋಟೋ ಹಂಚಿಕೊಂಡು ವಿವಾಹದ ಸುದ್ದಿ ಬಹಿರಂಗಪಡಿಸಿದ್ದಾರೆ. ಇದು ಈಗ ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಗಳ ವಯಸ್ಸಿನ ಯುವತಿ ಜೊತೆ ಮದುವೆಯಾದ ಸಂಸದನ ವಿರುದ್ಧ ಭಾರೀ ಟೀಕೆ ಮತ್ತು ಮೀಮ್ಸ್​ಗಳು ಹರಿದಾಡುತ್ತಿವೆ.

ತಮ್ಮ ಮದುವೆಯ ವಿರುದ್ಧ ಟೀಕೆ ಮಾಡದಂತೆ ಕೋರಿಕೊಂಡ ಸಂಸದ

18 ವರ್ಷದ ಹುಡುಗಿ ಜೊತೆ ಮೂರನೇ ಮದುವೆ:ಅಮೀರ್​ ಲಿಯಾಖತ್​ ಹುಸೈನ್​ ತಮ್ಮ ಎರಡನೇ ಪತ್ನಿಯಿಂದ 15 ತಿಂಗಳ ಹಿಂದೆಯೇ ದೂರವಾಗಿದ್ದಾನೆ. ಇಬ್ಬರೂ ಬೇರ್ಪಡುವ ನಿರ್ಧಾರ ಮಾಡಿದ್ದರು. ಎರಡು ದಿನಗಳ ಹಿಂದಷ್ಟೇ ಅಂದರೆ ಬುಧವಾರದಂದು ಸಂಸದ ಅಮೀರ್​ ತಮ್ಮ ಎರಡನೇ ಹೆಂಡತಿಗೆ ವಿಚ್ಚೇದನ ನೀಡಿದ್ದಾರೆ. ಅಂದು ರಾತ್ರಿಯೇ 18 ವರ್ಷದ ಸಯೀದಾಳ ಜೊತೆ ಸಪ್ತಪದಿ ತುಳಿದಿದ್ದಾರೆ.

ಅಭಿನಂದಿಸಿದ ಪ್ರಧಾನಿ ಇಮ್ರಾನ್​ ಖಾನ್​:18 ವರ್ಷದ ಯುವತಿ ಜೊತೆ ಮೂರನೇ ವಿವಾಹವಾದ ತಮ್ಮ ಪಕ್ಷದ ಸಂಸದನಿಗೆ ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಅಭಿನಂದನೆ ಸಲ್ಲಿಸಿದ್ದಾರೆ. ಇದಕ್ಕೆ ಲಿಯಾಖತ್​ ಧನ್ಯವಾದ ಸಲ್ಲಿಸಿದ್ದಾರೆ.

ಮದುವೆ ವಿರುದ್ಧ ಟೀಕೆ, ಮೀಮ್ಸ್​:49 ವರ್ಷದ ಸಂಸದ 18 ವರ್ಷದ ಯುವತಿ ಜೊತೆ ಮದುವೆಯಾದ ಸುದ್ದಿ ತಿಳಿದ ಬಳಿಕ ನೆಟಿಜೆನ್ಸ್​ ಟೀಕೆ, ಟ್ರೋಲ್​ ಮಾಡಲು ಶುರು ಮಾಡಿದ್ದಾರೆ. ನೀವು ಶ್ರೀಮಂತ ಮತ್ತು ಅಧಿಕಾರ ಹೊಂದಿದ್ದರೆ ಮುದುಕರಾಗಿದ್ದರೂ ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗಬಹುದು ಎಂದು ವ್ಯಂಗ್ಯವಾಡಿದರೆ, ಹುಡುಗಿಯರು ಶಿಕ್ಷಣ ಮತ್ತು ಆರ್ಥಿಕ ಸಶಕ್ತತೆಗೆ ಈ ದಾರಿ ಹಿಡಿಯುತ್ತಾರೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಓದಿ:ಹಿಜಾಬ್ ತೀರ್ಪು ನಮ್ಮ ವಿರುದ್ದವಾಗಿ ಬಂದರೆ ಕಾನೂನಾತ್ಮಕ ಹೋರಾಟ : ಸಿಎಫ್ಐ ರಾಜ್ಯಾಧ್ಯಕ್ಷ

For All Latest Updates

TAGGED:

ABOUT THE AUTHOR

...view details