ನವದೆಹಲಿ: ನಿರಂತರ ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಗುರುವಾರ ಲೋಕಸಭೆಯಿಂದ ಹೊರನಡೆದು ಪ್ರತಿಭಟಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗುರುವಾರ ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಾದ ಒಟ್ಟು ಏರಿಕೆಯನ್ನು ಲೆಕ್ಕ ಹಾಕಿದರೆ ಪ್ರತಿ ಲೀಟರ್‌ಗೆ ಒಟ್ಟು 6.40 ರೂ. ಏರಿಕೆಯಾಗಿದೆ.
ಇಂಧನ ಬೆಲೆಯೇರಿಕೆ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ
ದೇಶದಲ್ಲಿ ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸದಸ್ಯರು ಸಭಾಧ್ಯಕ್ಷರ ಮನವಿಯನ್ನೂ ನಿರ್ಲಕ್ಷಿಸಿ ಲೋಕಸಭೆಯಿಂದ ಹೊರನಡೆದು ಪ್ರತಿಭಟನೆ ನಡೆಸಿದ್ದಾರೆ.
ಇಂಧನ ಬೆಲೆಯೇರಿಕೆ ವಿರುದ್ಧ ಲೋಕಸಭೆಯಲ್ಲಿ ವಿಪಕ್ಷ ಸದಸ್ಯರಿಂದ ಪ್ರತಿಭಟನೆ
ಸದನ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಇಂಧನ ಬೆಲೆ ಏರಿಕೆ ವಿರೋಧಿಸಿ ಧರಣಿ ಆರಂಭಿಸಿ, ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಘೋಷಣಾ ಫಲಕಗಳನ್ನು ಹಿಡಿದು, ಸದಸ್ಯರು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ:ಸರ್ಕಾರ ಬಡವರ ಹಣ ಕದ್ದು ಕೈಗಾರಿಕೋದ್ಯಮಿಗಳಿಗೆ ನೀಡ್ತಿದೆ; ತೈಲ ಬೆಲೆ ಏರಿಕೆಗೆ ರಾಹುಲ್ ಗಾಂಧಿ ಕಿಡಿ