ಇಂದೋರ್(ಮಧ್ಯಪ್ರದೇಶ): ದೇಶಾದ್ಯಂತ ಕೋವಿಡ್ ಮೂರನೇ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತಿವೆ. ಈಗಾಗಲೇ ದೇಶದಲ್ಲಿ ತನ್ನ ಕಬಂಧಬಾಹು ಚಾಚುತ್ತಿರುವ ಓಮಿಕ್ರಾನ್ ರೂಪಾಂತರಿ ಹಾವಳಿ ಸಹ ಜೋರಾಗಿದೆ. ಇದೀಗ ಇದರ ಉಪಪ್ರಭೇದವಾಗಿರುವ BA2 ವೈರಸ್ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಒಮಿಕ್ರಾನ್ ಉಪ ಪ್ರಭೇದವಾಗಿರುವ BA2 ಕಾಣಿಸಿಕೊಂಡಿದ್ದು, ಆರು ಮಕ್ಕಳು ಸೇರಿದಂತೆ 16 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವವರಲ್ಲಿ BA2 ರೋಗ ಲಕ್ಷಣಗಳು ಇರಲಿದ್ದು, ಇದರಿಂದ ಯಾವುದೇ ರೀತಿಯ ಹೆಚ್ಚಿನ ತೊಂದರೆ ಇಲ್ಲವೆಂದು ತಿಳಿದುಬಂದಿದೆ. ಆದರೆ, ಕೆಲ ವೈದ್ಯರು ತಿಳಿಸಿರುವ ಪ್ರಕಾರ, ಇದು ಕೂಡ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ:ಸೆಲ್ಫಿ ಮಾರಾಟ ಮಾಡಿ ಕೋಟ್ಯಧೀಶನಾದ ವಿದ್ಯಾರ್ಥಿ.. ಐದು ವರ್ಷದಲ್ಲಿ ಈತ ಗಳಿಸಿದ್ದೆಷ್ಟು ಗೊತ್ತಾ!?