ಭುವನೇಶ್ವರ(ಒಡಿಶಾ) :ಜವಾದ್ ಚಂಡಮಾರುತ ಇಂದು ಮಧ್ಯಾಹ್ನದ ವೇಳೆಗೆ ಒಡಿಶಾ ಕರಾವಳಿಯ ಪುರಿ ಸಮೀಪ ತಲುಪುವ ಸಾಧ್ಯತೆ ಇದೆ. ಒಡಿಶಾದ ರಾಜಧಾನಿ ಭುವನೇಶ್ವರ ಸೇರಿ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಇದು ಉತ್ತರ-ಈಶಾನ್ಯ ಭಾಗ, ಒಡಿಶಾ ಕರಾವಳಿಯುದ್ದಕ್ಕೂ ಹಾಗೂ ಪಶ್ಚಿಮ ಬಂಗಾಳ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ. 12 ಗಂಟೆಗಳ ಬಳಿಕ ದುರ್ಬಲಗೊಳ್ಳುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD) ತಿಳಿಸಿದೆ.
ಅವಳಿ ನಗರದಲ್ಲಿ ಭಾರೀ ಮಳೆಯೊಂದಿಗೆ (7-11 ಸೆಂ.ಮೀ.) ಮೋಡ ಕವಿದ ವಾತಾವರಣವಿದ್ದರೆ, ಕಟಕ್ ಮತ್ತು ಭುವನೇಶ್ವರದ ಕೆಲವು ಭಾಗಗಳಲ್ಲಿ 30-40 ಕಿ.ಮೀ ಮೇಲ್ಮೈ ಗಾಳಿ ಬೀಸುತ್ತಿದೆ.