ಕರ್ನಾಟಕ

karnataka

ETV Bharat / bharat

ಆಸ್ಕರ್​ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದ ತಮಿಳಿನ ‘ಕೂಜಂಗಲ್’

ತಮಿಳು ನಿರ್ದೇಶಕ ಪಿ.ಎಸ್.ವಿನೋತ್‌ರಾಜ್ ಅವರ ಚೊಚ್ಚಲ ಚಿತ್ರ ಕೂಜಂಗಲ್ (ಪೆಬಲ್ಸ್) ಆಸ್ಕರ್​​ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ..

ಕೂಜಂಗಲ್
ಕೂಜಂಗಲ್

By

Published : Oct 23, 2021, 4:59 PM IST

ಹೈದರಾಬಾದ್ (ತೆಲಂಗಾಣ): ತಮಿಳು ನಿರ್ದೇಶಕ ಪಿ.ಎಸ್.ವಿನೋತ್‌ರಾಜ್ ಅವರ ಚೊಚ್ಚಲ ಚಿತ್ರ ಕೂಜಂಗಲ್ (ಪೆಬಲ್ಸ್) ಆಸ್ಕರ್​​ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. 94ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಈ ಸಿನಿಮಾ ಭಾರತವನ್ನು ಪ್ರತಿನಿಧಿಸಲಿದೆ.

15 ಸದಸ್ಯರ ಆಯ್ಕೆ ಸಮಿತಿಯ ಅಧ್ಯಕ್ಷರಾದ ಶಾಜಿ ಎನ್ ಕರುಣ್ ಅವರು ಇಂದು ಈ ಘೋಷಣೆ ಮಾಡಿದ್ದಾರೆ. ಈ ನಿರ್ಧಾರವು ಸರ್ವಾನುಮತದಿಂದ ಕೂಡಿದೆ ಎಂದು ಎಫ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಸುಪ್ರಾನ್ ಸೇನ್ ಹೇಳಿದ್ದಾರೆ.

ಮಾರ್ಚ್​ 27, 2022ರಂದು ಕ್ಯಾಲಿಫೋರ್ನಿಯಾದ ಐಕಾನಿಕ್ ಡಾಲ್ಬಿ ಥಿಯೇಟರ್​ನಲ್ಲಿ ನಡೆಯಲಿರುವ ವಿಶ್ವದ ಅತಿದೊಡ್ಡ ಸಿನಿಮಾ ಕಾರ್ನೀವಲ್​ ಆಸ್ಕರ್​​ನಲ್ಲಿ ಕೂಜಂಗಲ್ ಚಿತ್ರ ಭಾರತವನ್ನು ಪ್ರತಿನಿಧಿಸಲಿದೆ.

ವಿನೋತ್​ರಾಜ್​ ಅವರ ಮೊದಲ ನಿರ್ದೇಶನದ ಈ ಚಿತ್ರ ರೋಟರ್​ ಡ್ಯಾಮ್​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಟೈಗರ್ ಪ್ರಶಸ್ತಿಯನ್ನು ಪಡೆದುಕೊಂಡಿತು. 2017ರಲ್ಲಿ ಸನಲ್ ಕುಮಾರ್ ಶಶಿಧರನ್ ಅವರ ಸೆಕ್ಸಿ ದುರ್ಗಾ ನಂತರ ಟೈಗರ್ ಅವಾರ್ಡ್ ಪಡೆದ ಎರಡನೇ ಭಾರತೀಯ ಸಿನಿಮಾ ಕೂಜಂಗಲ್.

ಹಿಂದಿ ಚಲನಚಿತ್ರಗಳಾದ ಸರ್ದಾರ್ ಉದಾಮ್, ಶೆರ್ನಿ, ಮಲಯಾಳಂನ ನಯಟ್ಟು ಮತ್ತು ತಮಿಳಿನ ಮಂಡೇಲಾ ಸೇರಿದಂತೆ 15 ಚಿತ್ರಗಳನ್ನು ಸಮಿತಿ ಆಯ್ಕೆ ಮಾಡಿತ್ತು. ಆ ಪೈಕಿ ಕೂಜಂಗಲ್ ಚಿತ್ರವು ಅಧಿಕೃತವಾಗಿ ಆಸ್ಕರ್​​​​ ಅವಾರ್ಡ್​ಗೆ ಆಯ್ಕೆಯಾಗಿದೆ.

ಇದನ್ನೂ ಓದಿ: ಇದು 'ನಿಮ್ಮ ಪ್ರೊಡಕ್ಷನ್ ಹೌಸ್ ಅಲ್ಲ'.. ಅನನ್ಯಾ ಪಾಂಡೆಗೆ NCB ತರಾಟೆ..

ಕೂಜಂಗಲ್​​, ವಿನೋತ್​ ರಾಜ್​ ಕುಟುಂಬದ ನೈಜ ಘಟನೆಯಾಗಿದೆ. ಈ ಚಿತ್ರವು ಮದ್ಯವ್ಯಸನಿ ಗಂಡ, ಹೆಂಡತಿಗೆ ಹೊಡೆಯುವ ಕಥೆಯಾಗಿದೆ. ಚಿತ್ರದಲ್ಲಿ ಆಕೆ ತವರು ಮನೆ ಸೇರಿದ ನಂತರ ಅವಳನ್ನು ಮರಳಿ ಮನೆಗೆ ತರಲು ಪತಿ ಚಿಕ್ಕ ಮಗನೊಂದಿಗೆ ಪ್ರಯಾಣ ಬೆಳೆಸುತ್ತಾನೆ. ಚಿತ್ರದಲ್ಲಿ ನಯನ ತಾರಾ, ವಿಘ್ನೇಶ್ ಶಿವನ್ ಅಭಿನಯಿಸಿದ್ದು, ಯುವನ್ ಶಂಕರ್​ ರಾಜ ಸಂಗೀತ ನೀಡಿದ್ದಾರೆ.

ABOUT THE AUTHOR

...view details