ಕರ್ನಾಟಕ

karnataka

ETV Bharat / bharat

ಧೂಮಪಾನದಿಂದ Lung Cancer ಬಂದಿದೆ ಅನ್ನೋದಕ್ಕೆ ಪುರಾವೆಗಳಿಲ್ಲ : ಕೋರ್ಟ್​ ಹೀಗೆ ಹೇಳಿದ್ದೇಕೆ? - rejection of insurance claim

ಈ ಅರ್ಜಿಯ ವಿಚಾರನೆ ನಡೆಸಿದ ಕೋರ್ಟ್​, ಅಲೋಕ್ ಕುಮಾರ್​ಗೆ ಧೂಮಪಾನದಿಂದಲೇ ಲಂಗ್​ ಕ್ಯಾನ್ಸರ್‌ ಬಂದಿದೆ ಎಂದು ಹೇಳಲು ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಧೂಮಪಾನ ಮಾಡದ ಜನರೂ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಆತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡಿದ 93,297 ರೂ. ಹಣವನ್ನು ವಿಮಾ ಕಂಪನಿ ಪಾವತಿಸಬೇಕು..

smoking
smoking

By

Published : Oct 2, 2021, 5:04 PM IST

Updated : Oct 2, 2021, 6:55 PM IST

ಅಹಮದಾಬಾದ್ (ಉತ್ತರಪ್ರದೇಶ):ಧೂಮಪಾನ ವ್ಯಸನವೇ ರೋಗಿಗೆ ಶ್ವಾಸಕೋಶದ ಕ್ಯಾನ್ಸರ್‌ ಬರಲು ಕಾರಣ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಅಹಮದಾಬಾದ್​ನ ಗ್ರಾಹಕ ನ್ಯಾಯಾಲಯ ವಿಮೆ ಪಾವತಿಸಲು ವಿಮಾ ಕಂಪನಿಗೆ ಆದೇಶ ನೀಡಿದೆ.

ವಿಚಾರ ಏನು?:ಅಲೋಕ್ ಕುಮಾರ್ ಬ್ಯಾನರ್ಜಿ ಎಂಬುವರು ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ತಾವು ಇನ್ಯುರೆನ್ಸ್​ ಮಾಡಿಸಿದ್ದ ವಿಮಾ ಕಂಪನಿ ಬಳಿ ವಿಮೆ ಪಾವತಿಸಿ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸುವಂತೆ ಕೇಳಿದ್ದರು.

ಆದರೆ, ಇದಕ್ಕೆ ನಿರಾಕರಿಸಿದ ವಿಮಾ ಕಂಪನಿಯು, ಅಲೋಕ್ ಕುಮಾರ್ ಧೂಮಪಾನ ವ್ಯಸನಿಯಾಗಿದ್ದು, ಇದರಿಂದಲೇ ಕ್ಯಾನ್ಸರ್​ ಬಂದಿದೆ ಎಂದು ಹೇಳಿತ್ತು. ಕಂಪನಿ ವಿರುದ್ಧ ಅಲೋಕ್ ಕುಮಾರ್ ಪತ್ನಿ ಸ್ಮಿತಾ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಧೂಮಪಾನ ನಿಲ್ಲಿಸುವ ಔಷಧ ಮಹಿಳೆಯರಲ್ಲಿನ ಪಾರ್ಕಿಸನ್​ಗೆ ಔಷಧಿಯಾಗಬಲ್ಲದು!

ಈ ಅರ್ಜಿಯ ವಿಚಾರನೆ ನಡೆಸಿದ ಕೋರ್ಟ್​, ಅಲೋಕ್ ಕುಮಾರ್​ಗೆ ಧೂಮಪಾನದಿಂದಲೇ ಲಂಗ್​ ಕ್ಯಾನ್ಸರ್‌ ಬಂದಿದೆ ಎಂದು ಹೇಳಲು ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಧೂಮಪಾನ ಮಾಡದ ಜನರೂ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಆತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡಿದ 93,297 ರೂ. ಹಣವನ್ನು ವಿಮಾ ಕಂಪನಿ ಪಾವತಿಸಬೇಕು ಎಂದು ಹೇಳಿದೆ.

Last Updated : Oct 2, 2021, 6:55 PM IST

ABOUT THE AUTHOR

...view details