ಮಧ್ಯಪ್ರದೇಶ:ಕಳೆದ 50 ವರ್ಷಗಳಿಂದ ಈ ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲಾ. ಈಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸಹ ಇಲ್ಲಿ ಸುಳಿದಿಲ್ಲ.
ಅಂದ ಹಾಗೇ ಈ ಹಳ್ಳಿ ಇರುವುದು ಮಧ್ಯಪ್ರದೇಶದಲ್ಲಿ. ರೈಸನ್ ಜಿಲ್ಲೆಯ ಗೌಹರ್‌ಗಂಜ್ ತಹಸಿಲ್ ಪ್ರದೇಶದ ಲಂಕಾ ಎಂಬ ಹೆಸರಿನ ಹಳ್ಳಿಯಿದು. ಸದಾ ಹಸಿರು ಮತ್ತು ನದಿಯಿಂದ ಆವೃತವಾಗಿರುವುದರಿಂದ ಈ ಗ್ರಾಮಕ್ಕೆ ಲಂಕಾ ಎಂದು ಹೆಸರಿಡಲಾಗಿದೆ. ಈ ಲಂಕಾ ಕೊರೊನಾ ಸೋಂಕನ್ನು ರಾವಣನ ರೂಪದಲ್ಲಿ ತನ್ನಿಂದ ದೂರವಿರಿಸಿದೆ. ಹಳ್ಳಿಗರ ಪ್ರಕಾರ, ಹಸಿರು ತುಂಬಿದ ಹಸಿರು ವಾತಾವರಣದಿಂದಾಗಿ, ರೋಗಗಳು ಯಾವುದೇ ಪರಿಣಾಮ ಬೀರುವುದಿಲ್ಲ.