ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲೂ ನಾಳೆಯಿಂದ ನೈಟ್​ ಕರ್ಫ್ಯೂ, ಭಾನುವಾರ ಲಾಕ್​ಡೌನ್​

ಕೋವಿಡ್​ ಮೂರನೇ ಅಲೆ ತಮಿಳುನಾಡಿನಲ್ಲಿ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸ್ಟಾಲಿನ್​ ಸರ್ಕಾರ ನೈಟ್ ಕರ್ಫ್ಯೂ ಘೋಷಣೆ ಮಾಡಿದ್ದು, ಭಾನುವಾರದಂದು ಲಾಕ್​ಡೌನ್​ ಹೇರಿಕೆ ಮಾಡಿದೆ.

Night Curfew In Tamil Nadu
Night Curfew In Tamil Nadu

By

Published : Jan 5, 2022, 5:22 PM IST

ಚೆನ್ನೈ(ತಮಿಳುನಾಡು): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಜೋರಾಗಿದ್ದು, ಇದೇ ಕಾರಣಕ್ಕಾಗಿ ಅನೇಕ ರಾಜ್ಯಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿವೆ.

ತಮಿಳುನಾಡಿನಲ್ಲೂ ಕೊರೊನಾ ಆರ್ಭಟ ಹೆಚ್ಚಿದ್ದು ಸ್ಟಾಲಿನ್​ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಳೆಯಿಂದ ನೈಟ್​ ಕರ್ಫ್ಯೂ ಜಾರಿಯಾಗಲಿದ್ದು, ಇದರ ಜೊತೆಗೆ ಭಾನುವಾರದಂದು ಲಾಕ್​ಡೌನ್​ ಹೇರಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾತನಾಡಿ​, ರಾಜ್ಯದಲ್ಲಿ ನಾಳೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್​ ಕರ್ಫ್ಯೂ ಜಾರಿಯಾಗಲಿದೆ. ಭಾನುವಾರದಂದು ಲಾಕ್​ಡೌನ್​​ ಹೇರಿಕೆ ಮಾಡಲಾಗುವುದು ಎಂದಿದ್ದಾರೆ.

ಜನವರಿ 9ರಂದು ರೆಸ್ಟೋರೆಂಟ್​​ಗಳು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. 1ರಿಂದ 9ನೇ ತರಗತಿವರೆಗೆ ಆನ್​ಲೈನ್​ ತರಗತಿಗಳು ನಡೆಯಲಿದ್ದು, 10ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲಾ-ಕಾಲೇಜ್​​ಗಳಿಗೆ ತೆರಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ:ನಾನು ಏರ್ಪೋರ್ಟ್‌ವರೆಗೆ ಜೀವಂತವಾಗಿ ಬಂದಿದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್‌ ಹೇಳಿ: ಮೋದಿ

ತಮಿಳುನಾಡಿನ ಪ್ರಸಿದ್ಧ ಹಬ್ಬ ಪೊಂಗಲ್‌ಗೆ ಸಂಬಂಧಿಸಿದ ಸರ್ಕಾರಿ, ಖಾಸಗಿ ಸಮಾರಂಭಗಳನ್ನು ಮುಂದೂಡಲಾಗಿದೆ. ಬಸ್​, ಉಪನಗರ ರೈಲುಗಳು ಹಾಗೂ ಮೆಟ್ರೋಗಳಲ್ಲಿ ಶೇ. 50ರ ಆಸನದೊಂದಿಗೆ ಕಾರ್ಯನಿರ್ವಹಿಸಲಿವೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಧಾರ್ಮಿಕ ಸ್ಥಳಗಳಲ್ಲಿ ಭಕ್ತರಿಗೆ ಅನುಮತಿ ಇರುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

ABOUT THE AUTHOR

...view details