ಕರ್ನಾಟಕ

karnataka

ETV Bharat / bharat

ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಆ್ಯಂಟಿಲಿಯಾ ಬಳಿ ಸಚಿನ್​ ವಾಜೆ ಕರೆತಂದು ಘಟನೆ​ ಮರುಸೃಷ್ಟಿ - sachin vaze

ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಮುಕೇಶ್ ಅಂಬಾನಿ ನಿವಾಸ ಆ್ಯಂಟಿಲಿಯಾದ ಸಮೀಪಕ್ಕೆ ಆರೋಪಿ ಸಚಿನ್ ವಾಜೆಯನ್ನು ಕರೆತಂದು ಘಟನೆಯನ್ನು ಮರುಸೃಷ್ಟಿ ಮಾಡುತ್ತಿದ್ದು, ಮೊದಲಿಗೆ ಶರ್ಟ್​ ಮತ್ತು ಪ್ಯಾಂಟ್ ಧರಿಸಿ ಸ್ಥಳದಲ್ಲಿ ನಡೆದಾಡುವಂತೆ ವಾಜೆಗೆ ಸೂಚನೆ ನೀಡಿದ್ದಾರೆ.

NIA recreated the crime scene near antilia
ಆ್ಯಂಟಿಲಿಯಾ ಬಳಿ ಮರುಸೃಷ್ಟಿ

By

Published : Mar 20, 2021, 11:08 AM IST

ಮುಂಬೈ:ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಮುಖ್ಯ ಆರೋಪಿ ಸಚಿನ್ ವಾಜೆಯನ್ನು ಸ್ಥಳಕ್ಕೆ ಕರೆತಂದು ಘಟನೆಯ ಮರುಸೃಷ್ಟಿ ಮಾಡಿದ್ದಾರೆ.

ಆ್ಯಂಟಿಲಿಯಾ ಬಳಿ ಘಟನೆಯ ಮರುಸೃಷ್ಟಿ

ಮುಕೇಶ್ ಅಂಬಾನಿ ನಿವಾಸ ಆ್ಯಂಟಿಲಿಯಾದ ಸಮೀಪಕ್ಕೆ ಸಚಿನ್ ವಾಜೆಯನ್ನು ಕರೆತಂದ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಮೊದಲಿಗೆ ಶರ್ಟ್​ ಮತ್ತು ಪ್ಯಾಂಟ್ ಧರಿಸಿ ಸ್ಥಳದಲ್ಲಿ ನಡೆದಾಡುವಂತೆ ವಾಜೆಗೆ ಸೂಚನೆ ನೀಡಿದ್ದಾರೆ.

ನಂತರ ಕುರ್ತಾ ಧರಿಸಿ, ಕರವಸ್ತ್ರ ಧರಿಸಿ ನಡೆದಾಡುವಂತೆ ಸೂಚನೆ ನೀಡಲಾಗಿದ್ದು, ಸ್ಫೋಟಕ ಇರಿಸಿದ್ದ ಪ್ರಕರಣದ ಎಲ್ಲಾ ಸನ್ನಿವೇಶಗಳನ್ನು ಸೆರೆಹಿಡಿಯಲು ಈ ಮರುಸೃಷ್ಟಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ, ಘಟನೆಯ ಮರುಸೃಷ್ಟಿ ಮಾಡಲಾಗಿದೆ.

ಸಿಸಿಟಿವಿಯಲ್ಲಿ ಪತ್ತೆಯಾಗಿರುವುದು ಸಚಿನ್ ವಾಜೆ ಎಂಬುದನ್ನು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ. ಇದರ ಜೊತೆಗೆ ಎಸ್​ಯುವಿ ಕಾರಿನಲ್ಲಿರುವ ಬೆರಳಚ್ಚು ವಾಜೆ ಅವರ ಬೆರಳಚ್ಚಿಗೆ ಹೊಂದಾಣಿಕೆಯಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಚಿನ್ ವಾಜೆ ವಿರುದ್ಧ ಐಪಿಸಿ ಸೆಕ್ಷನ್ 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ ) 465 (ಫೋರ್ಜರಿ ಮಾಡುವುದು), 473 ( ಫೋರ್ಜರಿ ಮಾಡುವ ಉದ್ದೇಶದಿಂದ ನಕಲಿ ಮುದ್ರೆ ತಯಾರಿಸುವುದು ಅಥವಾ ಹೊಂದಿರುವುದು ), 506 (2) (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ, 120 ಬಿ ( ಕ್ರಿಮಿನಲ್ ಪಿತೂರಿ ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.

ABOUT THE AUTHOR

...view details