ನವದೆಹಲಿ: ಕಂಝಾವಾಲಾ ಹಿಟ್ ಅಂಡ್ ರನ್ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳ ಕೈವಾಡವೂ ಬಯಲಿಗೆ ಬಂದಿದೆ. ಒಟ್ಟಾರೆ ಏಳು ಜನರ ವಿರುದ್ಧ ಆರೋಪವಿದ್ದು, ಇನ್ನುಳಿದವರನ್ನು ಶೀಘ್ರ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರ ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಗುರುವಾರ ತಿಳಿಸಿದ್ದಾರೆ.
ದೆಹಲಿ ಪೊಲೀಸರು ಗುರುವಾರ ಕಾಂಜಾವಾಲಾ ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳನ್ನು ಪೊಲೀಸರು ವಿಚಾರಿಸಿದಾಗ, ಕಂಝಾವಾಲಾ ಹಿಟ್ ಅಂಡ್ ರನ್ ಘಟನೆಯ ಸಮಯದಲ್ಲಿ ಅಮಿತ್ ಕಾರನ್ನು ಓಡಿಸುತ್ತಿದ್ದರು. ದೀಪಕ್ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮತ್ತಿಬ್ಬರನ್ನು ಆರೋಪಿಗಳನ್ನು ಗುರುತಿಸಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಹೇಳಿದರು.
ಒಬ್ಬ ಆರೋಪಿ ಅಶುತೋಷ್ ಬಂಧಿತ ಆರೋಪಿಗಳು ಕಾರಿಗೆ ಬೇಡಿಕೆ ಇಟ್ಟಿದ್ದರು. ಇದೇ ವೇಳೆ, ಮತ್ತೊಬ್ಬ ಆರೋಪಿ ಅಂಕುಶ್ ಕೂಡ ಆರೋಪಿಗಳ ಜತೆ ಸಂಪರ್ಕದಲ್ಲಿದ್ದನು. ಇನ್ನುಳಿದ ಆರೋಪಿಗಳಿಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅದೇ ಪೊಲೀಸರ ತನಿಖೆಯ ವೇಳೆ ಬಂಧಿತ ಆರೋಪಿಗಳು ನೀಡಿದ ಹೇಳಿಕೆಯೂ ತಪ್ಪು ಎಂಬುದು ಬೆಳಕಿಗೆ ಬಂದಿದೆ. ಘಟನೆ ನಡೆದಾಗ ದೀಪಕ್ ಕಾರು ಚಲಾಯಿಸಿರಲಿಲ್ಲ. ಆದರೆ, ಅಮಿತ್ ಕಾರು ಚಲಾಯಿಸುತ್ತಿದ್ದ ಕಾರಣ ಅಮಿತ್ ಬಳಿ ಲೈಸೆನ್ಸ್ ಇಲ್ಲ, ಹಾಗಾಗಿ ದೀಪಕ್ ಕಾರು ಚಲಾಯಿಸುತ್ತಿದ್ದ ಎಂದು ಆರೋಪಿಗೆ ಅಂಕುಶ್ ತಿಳಿಸಿದ್ದಾನೆ ಎನ್ನಲಾಗಿದೆ.
ವಿವಿಧ ಸ್ಥಳಗಳಲ್ಲಿ ದೊರೆತ ಸಿಸಿಟಿವಿ ದೃಶ್ಯಾಗಳಿಂದ ಸ್ಪಷ್ಟ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. ಈ ವೇಳೆ, ಇಲ್ಲಿಯವರೆಗೂ ಅಂಜಲಿಯ ಸ್ಕೂಟಿ ಮಾತ್ರ ಪೊಲೀಸರು ವಶಪಡಿಸಿಕೊಂಡಿದ್ದು, ಆಕೆಯ ಮೊಬೈಲ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ನಿಧಿ ಜತೆಗಿನ ಅಂಜಲಿ ಗೆಳೆತನದ ವಿಚಾರವಾಗಿ ಡಿಸೆಂಬರ್ 29ರಿಂದ ಡಿಸೆಂಬರ್ 31ರ ನಡುವೆ ಅವರ ನಡುವೆ 25ರಿಂದ 30 ಕರೆಗಳು ಬಂದಿದ್ದವು. ಸಿಡಿಆರ್ ವರದಿಯ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಮಾಹಿತಿ ನೀಡಿದರು.