ಕರ್ನಾಟಕ

karnataka

ETV Bharat / bharat

ಪಂಚ ರಾಜ್ಯ ಚುನಾವಣೆ: ಅಚ್ಚರಿಯಾದ್ರೂ ಇದು ಸತ್ಯ.. ನೋಟಾಗೆ ಗುದ್ದಿದ ಸುಮಾರು ಎಂಟು ಲಕ್ಷ ಮಂದಿ!

ಪಂಚ ರಾಜ್ಯ ಚುನಾವಣೆಯಲ್ಲಿ ನಡೆದ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಗಳಲ್ಲಿ ಸುಮಾರು ಎಂಟು ಲಕ್ಷ ಮತದಾರರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

voters opted for nota  Nearly eight lakh voters opted for NOTA  five states election 2022  ನೋಟಾ ಆಯ್ಕೆ ಮಾಡಿದ ಮತದಾರರು  ನೋಟಾ ಆಯ್ಕೆ ಮಾಡಿದ ಸುಮಾರು ಎಂಟು ಲಕ್ಷ ಮತದಾರರು  ಪಂಚ ರಾಜ್ಯ ಚುನಾವಣೆ 2022
ನೋಟಾ ಆಯ್ಕೆ

By

Published : Mar 11, 2022, 9:14 AM IST

ನವದೆಹಲಿ:ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಸುಮಾರು ಎಂಟು ಲಕ್ಷ ಮತದಾರರು ಮತದಾನದ ವೇಳೆ 'ನನ್ ಆಫ್ ದಿ ಎಬೋವ್​' ಅಂದರೆ ನೋಟಾ ಆಯ್ಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ನೋಟಾ ಆಯ್ಕೆ

ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ನಾವು ರಾಜ್ಯಗಳ ಪ್ರಕಾರ ಹೇಳೋದಾದರೆ, ಮಣಿಪುರದ ಒಟ್ಟು ಮತದಾರರಲ್ಲಿ 10,349 (ಶೇ. 0.6) ಜನರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ಗೋವಾದಲ್ಲಿ 10,629 ಮತದಾರರು (ಶೇ. 1.1) ಈ ಆಯ್ಕೆ ಚಲಾಯಿಸಿದ್ದಾರೆ.

ಓದಿ:ಗುಜರಾತ್​ಗೆ ಇಂದು ಪ್ರಧಾನಿ ಮೋದಿ ಭೇಟಿ, ರೋಡ್ ಶೋ.. 4 ಲಕ್ಷ ಜನ ಭಾಗಿ ಸಾಧ್ಯತೆ

ಮತ್ತೊಂದೆಡೆ, ರಾಜಕೀಯವಾಗಿ ಅತ್ಯಂತ ಪ್ರಮುಖವೆಂದು ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶವು ಗರಿಷ್ಠ ಸಂಖ್ಯೆ 403 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಇದರಲ್ಲಿ 621,186 ಮತದಾರರು (ಶೇ. 0.7) ಇವಿಎಂಗಳಲ್ಲಿ ನೋಟಾ ಆಯ್ಕೆಯ ಬಟನ್ ಒತ್ತಿದ್ದಾರೆ. ಮತ್ತೊಂದೆಡೆ, ಉತ್ತರಾಖಂಡದಲ್ಲಿ ನೋಟಾ ಆಯ್ಕೆಯನ್ನು ಆರಿಸಿಕೊಂಡವರ ಸಂಖ್ಯೆ 46,830 (ಶೇ. 0.9). ಇದರೊಂದಿಗೆ ಪಂಜಾಬ್‌ನಲ್ಲಿ 1,10,308 ಮತದಾರರು (ಶೇ. 0.9) ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಮೂಲಕ ಒಟ್ಟು ಐದು ರಾಜ್ಯಗಳಲ್ಲಿ 7,99,302 ಮತದಾರರು ನೋಟಾ ಆಯ್ಕೆಯನ್ನು ಆರಿಸಿಕೊಂಡು ತಮ್ಮ ಹಕ್ಕು ಚಲಾಯಿಸಿದ್ದಾರೆ.


ABOUT THE AUTHOR

...view details