ಕರ್ನಾಟಕ

karnataka

ETV Bharat / bharat

ಎನ್‌ಡಿಎ ಚುನಾಯಿತ ಶಾಸಕರ ಸಭೆ: ಯಾರಾಗ್ತಾರೆ ಬಿಹಾರ ಸರ್ಕಾರದ ಸಾರಥಿ?

ಬಿಹಾರದಲ್ಲಿಂದು ಎನ್​ಡಿಎ ಒಕ್ಕೂಟದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ವೇಳೆ ನೂತನ ನಾಯಕನ ಆಯ್ಕೆ ನಡೆಯಲಿದೆ. ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ಚುನಾಯಿತ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎನ್‌ಡಿಎ ಚುನಾಯಿತ ಶಾಸಕರ ಸಭೆ
ಎನ್‌ಡಿಎ ಚುನಾಯಿತ ಶಾಸಕರ ಸಭೆ

By

Published : Nov 15, 2020, 9:50 AM IST

ಪಾಟ್ನಾ: ಬೆಳಗ್ಗೆ 10 ಗಂಟೆಗೆ ಹೊಸದಾಗಿ ಚುನಾಯಿತರಾದ ಶಾಸಕರೊಂದಿಗೆ ಸಭೆ ನಡೆಸಲಿದ್ದು, ಬಿಹಾರ ಸರ್ಕಾರಕ್ಕೆ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಈ ಸಭೆಯಲ್ಲಿ ಭಾಗಿಯಾಗಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ಪಾಟ್ನಾಕ್ಕೆ ಆಗಮಿಸಿದ್ದಾರೆ.

ಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಬಿಹಾರ ಚುನಾವಣಾ ಉಸ್ತುವಾರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಭೂಪೇಂದ್ರ ಯಾದವ್ ಕೂಡ ಭಾಗವಹಿಸಲಿದ್ದಾರೆ. ಬಿಜೆಪಿಯಿಂದ ಕೇಂದ್ರ ವೀಕ್ಷಕರಾಗಿ ಬಿಹಾರಕ್ಕೆ ಬರುತ್ತಿರುವ ರಾಜನಾಥ್ ಸಿಂಗ್, ಔಪಚಾರಿಕವಾಗಿ ಬಿಜೆಪಿ ವಿಧಾನಸಭಾ ನಾಯಕನನ್ನು ಘೋಷಿಸಲಿದ್ದಾರೆ.

ಬಿಜೆಪಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 74 ಶಾಸಕರನ್ನು ಗೆದ್ದಿದೆ. ಅಂತಹ ಪರಿಸ್ಥಿತಿಯಲ್ಲಿ ಪಕ್ಷದ ನಾಯಕರು ವಿಶ್ವಾಸ ಹೊಂದಿದ್ದಾರೆ. ಬದಲಾದ ಸಂದರ್ಭಗಳಲ್ಲಿ, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷವು ಭಾನುವಾರ ರಾಜ್ಯ ಕಚೇರಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಭೆ ನಡೆಸಲಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿಹಾರದ ಉಪ ಮುಖ್ಯಮಂತ್ರಿಯಾಗಲಿದ್ದಾರಂತೆ.

ಎನ್‌ಡಿಎ ಶಾಸಕಾಂಗ ಪಕ್ಷವು ಮಧ್ಯಾಹ್ನ 12.30 ಕ್ಕೆ ಸಭೆ ಸೇರಲಿದ್ದು, ಸಿಎಂ ಹುದ್ದೆಗೆ ನಿತೀಶ್ ಕುಮಾರ್ ಅವರ ಹೆಸರನ್ನು ಔಪಚಾರಿಕವಾಗಿ ಪ್ರಕಟಿಸಲಾಗುವುದು.

For All Latest Updates

TAGGED:

ABOUT THE AUTHOR

...view details