ಮುಂಬೈ: ಭುವನ ಸುಂದರಿ ಪಟ್ಟ ಅಲಂಕರಿಸಿದ 3ನೇ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಹರ್ನಾಜ್ ಸಂಧು ಪಾತ್ರರಾಗಿದ್ದಾರೆ. 2000 ರಲ್ಲಿ ಗೆದ್ದ ಲಾರಾ ದತ್ತಾ ಭೂಪತಿ ಮತ್ತು 1994 ರಲ್ಲಿ ಸುಶ್ಮಿತಾ ಸೇನ್ ಸೇರಿ ಭುವನ ಸುಂದರಿ ಪಟ್ಟ ಅಲಂಕರಿಸಿದ್ದರು. ಈ ಬಾರಿ ಮಿಸ್ ಯುನಿವರ್ಸ್ ಕಿರೀಟ ಧರಿಸಿದ ಹರ್ನಾಜ್ ಸಂಧು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಚಂಡೀಗಢದ 21 ವರ್ಷದ ನಟಿ ಮತ್ತು ರೂಪದರ್ಶಿ ಹರ್ನಾಜ್ ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸ್ವಾನೆ ಮತ್ತು ಪರಾಗ್ವೆಯ ನಾಡಿಯಾ ಫೆರೇರಾರನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು. ಲಾರಾ ದತ್ತ ನಂತರ ಬರೋಬ್ಬರಿ 21 ವರ್ಷಗಳ ಬಳಿಕ ಕಿರೀಟ ಭಾರತಕ್ಕೆ ಸಂದಿದೆ. ಈ ಮೂಲಕ ಹರ್ನಾಜ್ ವಿಜಯಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
'ಈಟಿವಿ ಭಾರತ'ದೊಂದಿಗಿನ ಕಿರು ಸಂದರ್ಶನದಲ್ಲಿ ಮಿಸ್ ಯೂನಿವರ್ಸ್ 2021 ಎಂದು ಘೋಷಿಸಿದಾಗ ನಿಮಗೆ ಏನನ್ನಿಸಿತು ಎಂದು ಕೇಳಿದಾಗ, "ಇದು ನನ್ನ ಹೆಸರಲ್ಲ, ಆದರೆ ನನ್ನ ದೇಶದ ಹೆಸರನ್ನು ವಿಜೇತ ಎಂದು ಘೋಷಿಸಿದ್ದು, ಅದೊಂದು ಅದ್ಭುತ ಕ್ಷಣವಾಗಿದೆ. ಅವರು ನನ್ನನ್ನು ನನ್ನ ದೇಶದ ಹೆಸರಿನಿಂದ ಉಲ್ಲೇಖಿಸಿದಾಗ ನಾನು ಹೆಮ್ಮೆಪಟ್ಟೆ ಎಂದು ಭಾವುಕರಾದರು.
ಇದನ್ನೂ ಓದಿ:ಹರ್ನಾಝ್ ಸಂಧುಗೆ ಭುವನ ಸುಂದರಿ ಕಿರೀಟ.. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಅದೃಷ್ಟ