ಇಂದೋರ್ (ಮಧ್ಯಪ್ರದೇಶ):ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ವಿಜಯ್ ನಗರ ಪೊಲೀಸರು ವೈಶ್ಯಾವಟಿಕೆ ದಂಧೆಯನ್ನು ಬಯಲಿಗೆಳೆದಿದ್ದರು. ಈ ವೇಳೆ ಬಾಂಗ್ಲಾದೇಶದ ಸುಮಾರು 21 ಹುಡುಗಿಯರನ್ನು ಆರೋಪಿಗಳ ಹಿಡಿತದಿಂದ ರಕ್ಷಿಸಲಾಗಿತ್ತು.
ಆರೋಪಿಗಳು ಬಾಂಗ್ಲಾದೇಶದಿಂದ ಇಂದೋರ್‌ಗೆ ಹುಡುಗಿಯರನ್ನು ಕರೆತಂದು ಭಾರತದ ವಿವಿಧ ಭಾಗಗಳಿಗೆ ಕಳುಹಿಸಿ ಕೊಡುತ್ತಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾನವ ಕಳ್ಳಸಾಗಣೆದಾರನನ್ನು ಗುಜರಾತ್‌ನ ಸೂರತ್ನಲ್ಲಿ ವಿಜಯ್‌ನಗರ ಪೊಲೀಸರು ಮತ್ತು ಇಂದೋರ್ ಎಸ್ಐಟಿ ಜಂಟಿ ಕಾರ್ಯಾಚರಣೆ ನಡೆಸಿ ಇತ್ತೀಚೆಗೆ ಬಂಧಿಸಿದ್ದರು.
ಬಂಧಿತ ಆರೋಪಿಯನ್ನು ಮುನೀರ್ ಅಲಿಯಾಸ್ ಮುನಿರುಲ್ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಆತ ಆಘಾತಕಾರಿ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. 200ಕ್ಕೂ ಹೆಚ್ಚು ಬಾಂಗ್ಲಾದೇಶಿ ಹುಡುಗಿಯರನ್ನು ಭಾರತಕ್ಕೆ ಕರೆತಂದು, ಅವರನ್ನು ವೇಶ್ಯಾವಾಟಿಕೆಯ ಕಗ್ಗಂಟಿಗೆ ತಳ್ಳಿದ್ದಾನೆ. ಆ ಹುಡುಗಿಯರು ಕಳೆದ 5 ವರ್ಷಗಳಿಂದ ಈ ವ್ಯವಹಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ, ಈತನು ಈವರೆಗೆ 75 ಹುಡುಗಿಯರನ್ನು ಮದುವೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.