ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರ ಠಾಕ್ರೆ ಸರ್ಕಾರ ಹಾಗೂ ರಾಜ್ಯಪಾಲ ಭಗತ್ ಕೋಶಿಯಾರಿ ನಡುವೆ ಕಳೆದ ಕೆಲ ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದರ ಮಧ್ಯೆ ರಾಜ್ಯಪಾಲರು ಮೂರು ದಿನಗಳ ಮರಾಠಾವಾಡ್ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಕೆಲವೊಂದು ಹಾಸ್ಟೇಲ್ ಉದ್ಘಾಟನೆ ಮಾಡಲಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ನವೆಂಬರ್ 2020ರ ಮೊದಲ ವಾರದಲ್ಲಿ ಸಮ್ಮಿಶ್ರ ಸರ್ಕಾರ ರಾಜ್ಯಪಾಲರ ಖೋಟಾದ ಅಡಿ ಪರಿಷತ್ಗೆ ನಾಮ ನಿರ್ದೇಶನಗೊಳ್ಳಬೇಕಿದ್ದ ಸದಸ್ಯರ ಪಟ್ಟಿ ಗವರ್ನರ್ಗೆ ರವಾನೆ ಮಾಡಬೇಕಾಗಿತ್ತು. 12 ಸದಸ್ಯರ ಪಟ್ಟಿಗೆ ಸಹಿ ಹಾಕುವುದಕ್ಕೆ ರಾಜ್ಯಪಾಲರು ವಿಳಂಬ ಮಾಡುತ್ತಿರುವುದನ್ನು ಕೋರ್ಟ್ನಲ್ಲಿ ಪ್ರಶ್ನಿಸಲು ಸರ್ಕಾರ ಮುಂದಾಗಿತ್ತು. ಇದೇ ವಿಚಾರವಾಗಿ ಅಲ್ಲಿನ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಗುದ್ದಾಟ ನಡೆಯುತ್ತಿದ್ದು, ಇದೀಗ ಬೇರೆ ವಿಷಯಗಳಲ್ಲೂ ಅದು ಮುಂದುವರೆದಿದೆ.