ಕರ್ನಾಟಕ

karnataka

ETV Bharat / bharat

ಅಬ್ಬಬ್ಬಾ..!! ಈ ಮ್ಯಾಂಗೋ ನೋಡಿದಿರಾ.. ಒಂದು ಕೆಜಿ ಹಣ್ಣಿನ ಬೆಲೆ ಬರೋಬ್ಬರಿ ₹2 ಲಕ್ಷ.. - ಜಪಾನ್​ನ ‘ತೈಯು ನೋ ತಮಾಗೊ

ರಾಣಿ ಪರಿಹಾರ್​ ಹೆಸರಿನ ಈ ಹಣ್ಣನ್ನು ಬೆಳೆಸುವುದು ಸುಲಭದ ಮಾತಲ್ಲ. ಈ ಮರವು ಅತ್ಯಂತ ಕಡಿಮೆ ಹಣ್ಣುಗಳನ್ನು ಹೊಂದಿದ್ದು, ಭಾರತಕ್ಕಿಂತ ವಿದೇಶದಲ್ಲಿ ಇದಕ್ಕೆ ಹೆಚ್ಚು ಬೇಡಿಕೆಯಿದೆ. ನೇರಳೆ, ಗುಲಾಬಿ ಬಣ್ಣದ ಮಾವುಗಳನ್ನು ಇಲ್ಲಿ ಬೆಳೆಯಲಾಗುತ್ತದೆ..

spacial_mango
ಒಂದು ಕೆ.ಜಿ. ಮಾವಿನ ಹಣ್ಣಿನ ಬೆಲೆ 2 ಲಕ್ಷ ರೂ..

By

Published : Jun 8, 2021, 7:56 PM IST

ಜಬಲ್ಪುರ್(ಮಧ್ಯ ಪ್ರದೇಶ):ವಿಶ್ವದಲ್ಲೇ ಅತಿ ಹೆಚ್ಚು ಮಾವಿನಹಣ್ಣು ಬೆಳೆಯುವ ದೇಶ ಭಾರತ. ಈ ಮಾವಿನ ಹಣ್ಣನ್ನು ಹೆಚ್ಚಾಗಿ ಖರೀದಿಸುವವರು ಜಪಾನ್​​ನವರು. ಜಪಾನ್​ನ ‘ತೈಯು ನೋ ತಮಾಗೊ’ ಎಂದು ಕರೆಯಲ್ಪಡುವ ಮಾವು ಒಂದು ಕೆಜಿಗೆ 2 ಲಕ್ಷ ರೂ. ಬೆಲೆಯಲ್ಲಿ ಮಾರಾಟವಾಗುತ್ತದೆ.

ಇದನ್ನು ಸನ್ ತೈಯು ತಮ್ಗೌ ಎಂದೂ ಕರೆಯುತ್ತಾರೆ. ಜಬಲ್ಪುರದಿಂದ ಚಾರ್ಗ್ವಾನ್ ರಸ್ತೆಯವರೆಗೆ ಸಂಕಲ್ಪ ಪರಿಹಾರ್ ಮತ್ತು ರಾಣಿ ಪರಿಹಾರ್ ಎಂಬ ತೋಟಗಳಿವೆ. ಇಲ್ಲಿ 14 ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ಅವುಗಳಲ್ಲಿ ಅತ್ಯಂತ ದುಬಾರಿ ಮಾವಿನ ಹಣ್ಣುಗಳಾದ ತೈಯು ತಮ್ಗೌನ ಕೆಲ ಮರಗಳಿವೆ. ಕಳೆದ ನಾಲ್ಕು ವರ್ಷಗಳಿಂದ ಈ ತಳಿಯ ಮರಗಳನ್ನು ಬೆಳೆಸಲಾಗುತ್ತದೆ.

ರಾಣಿ ಪರಿಹಾರ್​ ಹೆಸರಿನ ಈ ಹಣ್ಣನ್ನು ಬೆಳೆಸುವುದು ಸುಲಭದ ಮಾತಲ್ಲ. ಈ ಮರವು ಅತ್ಯಂತ ಕಡಿಮೆ ಹಣ್ಣುಗಳನ್ನು ಹೊಂದಿದ್ದು, ಭಾರತಕ್ಕಿಂತ ವಿದೇಶದಲ್ಲಿ ಇದಕ್ಕೆ ಹೆಚ್ಚು ಬೇಡಿಕೆಯಿದೆ. ನೇರಳೆ, ಗುಲಾಬಿ ಬಣ್ಣದ ಮಾವುಗಳನ್ನು ಇಲ್ಲಿ ಬೆಳೆಯಲಾಗುತ್ತದೆ.

ಖದೀಮರು ಮಾವಿನ ಹಣ್ಣನ್ನು ಕದ್ದು ಅತೀ ಕಡಿಮೆ ಬೆಲೆಗೆ ಮಾರುತ್ತಾರೆ. ಹಾಗಾಗಿ, ತೋಟದ ರಕ್ಷಣೆಗೆಂದೇ ಕಾವಲುಗಾರರನ್ನಿಡಲಾಗಿದೆ. ಸರ್ಕಾರವು ಇಂಥ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಹಾಗಾಗಿ, ಈ ಬೆಳೆ ಸಣ್ಣ, ಮಧ್ಯಮ ರೈತರಿಗೆ ತಲುಪುತ್ತಿಲ್ಲ ಅನ್ನೋದು ಅಲ್ಲಿನ ರೈತರ ಅಭಿಪ್ರಾಯ.

ABOUT THE AUTHOR

...view details