ದಾತಿಯಾ (ಮಧ್ಯಪ್ರದೇಶ): ಸರ್ಕಾರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿ ಓದಲು ಬಾರದಿದ್ದಕ್ಕೆ, ಶಿಕ್ಷಕರು ಹಾಗೂ ಪ್ರಾಂಶುಪಾಲರ ವಿರುದ್ಧ ಜಿಲ್ಲಾ ಮ್ಯಾಜಿಸ್ಟ್ರೇಟ್ ಗರಂ ಆಗಿದ್ದಾರೆ. ಈ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಆನಂದಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಸಂಜಯ್ ಕುಮಾರ್ ಅವರು ಆನಂದಪುರ ಗ್ರಾಮದ ಸರ್ಕಾರಿ ಶಾಲೆಗೆ ತಪಾಸಣೆಗೆಂದು ಭೇಟಿ ನೀಡಿದ್ದಾರೆ. ಈ ವೇಳೆ ಮಕ್ಕಳ ಬಳಿ ಪುಸ್ತಕವನ್ನು ಓದಿಸಿದ್ದಾರೆ. ಆದ್ರೆ ಮಕ್ಕಳಿಗೆ ಓದಲು ಬಂದಿಲ್ಲ. ಇದನ್ನು ಕಂಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿಕ್ಷಕರಿಗೆ ಬೈದಿದ್ದಾರೆ. ಅವರು ಬೈಯುವ ವಿಡಿಯೋ ಸಹ ಇದೀಗ ವೈರಲ್ ಆಗುತ್ತಿದೆ.
ಶಿಕ್ಷಕರಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತರಾಟೆ ಇದನ್ನೂ ಓದಿ:ಸುಳ್ಳು ದೂರು ನೀಡುವಂತೆ ಬಾಲಕಿಯರಿಗೆ ಪ್ರಚೋದಿಸಿದ್ದ ಪ್ರಿನ್ಸಿಪಾಲ್ ವಿರುದ್ಧ ಪೋಕ್ಸೊ ಕೇಸ್!
ಪ್ರತಿಯೊಬ್ಬರಿಗೂ ಸರಾಸರಿ 50,000 ರೂಪಾಯಿ ಸಂಬಳ ಬರುತ್ತದೆ. ಒಟ್ಟಾರೆಯಾಗಿ ನೀವೆಲ್ಲರೂ 4.5 ಲಕ್ಷ ಸಂಬಳ ಪಡೆಯುತ್ತಿದ್ದೀರಿ. ಪ್ರಾಂಶುಪಾಲರೇ 1 ಲಕ್ಷ ರೂಪಾಯಿ ವೇತನವನ್ನು ಪಡೆಯುತ್ತಾರೆ. ಆದರೆ 6 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿ ಓದಲು ಬರುತ್ತಿಲ್ಲ. ಇದರಿಂದ ನಿಮಗೆ ನಾಚಿಕೆ ಆಗಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತರಾಟೆಗೆ ತೆಗೆದುಕೊಂಡಿರುವು ವಿಡಿಯೋದಲ್ಲಿದೆ.
ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಅವರು ಬುಧವಾರ ಮಧ್ಯಾಹ್ನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರಿ ಕಂಡು ದಿಢೀರ್ ತಪಾಸಣೆ ನಡೆಸಿದರು. ಬಳಿಕ ಮುಖ್ಯಗುರುಗಳನ್ನು ತರಾಟೆಗೆ ತೆಗೆದುಕೊಂಡ ಅವರು ಆಯಾ ಶಿಕ್ಷಕರಿಗೆ ಕರೆ ಮಾಡಿ ಕೂಡಲೇ ಶಾಲೆಗೆ ಬರುವಂತೆ ತಾಕೀತು ಮಾಡಿದರು.