ಅರ್ವಾಲ್ (ಬಿಹಾರ):ಅರ್ವಾಲ್ನ ಪರಾಸೀ ಪೊಲೀಸ್ ಠಾಣೆ ವ್ಯಾಪ್ತಿಯ ಚಕಿಯಾ ಗ್ರಾಮದಲ್ಲಿ ರೌಡಿಗಳು ದಾಂಧಲೆ ನಡೆಸಿದ್ದು, ಮನೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಸುಟ್ಟು ಕರಕಲಾಗಿದ್ದಾರೆ. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿಂದ ಅವರನ್ನು ಪಿಎಂಸಿಎಚ್ಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಬಳಿಕ ಇಬ್ಬರೂ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಸುಮನ್ ದೇವಿ ಮತ್ತು ಅವರ ಪುತ್ರಿ ಶಾರದಾ ಕುಮಾರಿ ಎಂದು ಗುರುತಿಸಲಾಗಿದೆ. ಸುಮನ್ ದೇವಿ ಪತಿ ಅಜಿತ್ ಪಾಸ್ವಾನ್ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ. ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಸೋಮವಾರ ತಡರಾತ್ರಿ ಯುವಕನೊಬ್ಬ ಕೆಟ್ಟ ಉದ್ದೇಶದಿಂದ ಮನೆಗೆ ಪ್ರವೇಶಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಬಳಿಕ ಆತನ ಯೋಜನೆ ಸಫಲವಾಗದಿದ್ದಾಗ ಪೆಟ್ರೋಲ್ ಎರಚಿ ಮನೆಗೆ ಬೆಂಕಿ ಹಚ್ಚಿದ್ದಾನೆ. ಇದರಲ್ಲಿ ಸುಮನ್ ಮತ್ತು ಶಾರದಾ ಸುಟ್ಟು ಕರಕಲಾಗಿದ್ದಾರೆ.
ಇದನ್ನೂ ಓದಿ:ಧಗಧಗನೆ ಉರಿದ ಖಾಸಗಿ ಬಸ್.. ಮಕ್ಕಳು ಸೇರಿ 14 ಮಂದಿ ಸಜೀವ ದಹನ