ನವದೆಹಲಿ:ಅಜಂತಾ ಬ್ರ್ಯಾಂಡ್ ಗಡಿಯಾರ ತಯಾರಿಸುವ ಎಲೆಕ್ಟ್ರಿಕಲ್ ಅಪ್ಲಯನ್ಸಸ್ ಕಂಪನಿಯಾದ ಒರೇವಾ ಗ್ರೂಪ್ 15 ವರ್ಷಗಳ ಕಾಲ ಮೋರ್ಬಿ ಸೇತುವೆಯನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿತ್ತು ಎಂದು ನಗರಸಭೆ ಮುಖ್ಯಾಧಿಕಾರಿ ಸಂದೀಪಸಿನ್ಹ ಝಾಲಾ ಹೇಳಿದ್ದಾರೆ. ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 134ಕ್ಕೆ ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲೇ ಅತಿ ಭೀಕರ ದುರ್ಘಟನೆಯಾಗಿರುವ ಮೋರ್ಬಿ ಸೇತುವೆ ಕುಸಿತದ ಬಗ್ಗೆ ಸರ್ಕಾರ ಕ್ರಿಮಿನಲ್ ತನಿಖೆಗೆ ಆದೇಶಿಸಿದೆ.
ಸೇತುವೆಯನ್ನು ಮತ್ತೆ ಆರಂಭಿಸುವ ಬಗ್ಗೆ ಅವರು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೆ ನಾವು ಅವರಿಗೆ ಯಾವುದೇ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ನೀಡಿರಲಿಲ್ಲ ಎಂದು ಝಾಲಾ ತಿಳಿಸಿದ್ದಾರೆ.