ಕರ್ನಾಟಕ

karnataka

ETV Bharat / bharat

ನನಗೆ, ನನ್ನ ಅಪ್ಪನಿಗೆ ಅಮ್ಮ ಪ್ರತಿ ದಿನ ಹೊಡೆಯುತ್ತಾಳೆ... ನಮ್ಮನ್ನು ರಕ್ಷಿಸಿ ಪೊಲೀಸ್ ಅಂಕಲ್... ಬಾಲಕನ ವಿಡಿಯೋ ವೈರಲ್ - ಅಮ್ಮನ ವಿರುದ್ಧ ಪೊಲೀಸರಿಗೆ ಬಾಲಕನ ದೂರು

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಮೂರು ವರ್ಷದ ಪುಟ್ಟ ಬಾಲಕನೊಬ್ಬ ತನ್ನ ತಾಯಿ ವಿರುದ್ಧ ದೂರಿದ ವಿಡಿಯೋ ವೈರಲ್​ ಆಗಿದೆ.

mom-beats-me-and-dad-please-save-my-family-child-appeal-uttar-pradesh-police
ನನಗೆ, ನನ್ನ ಅಪ್ಪನಿಗೆ ಅಮ್ಮ ಪ್ರತಿದಿನ ಹೊಡೆಯುತ್ತಾಳೆ... ನಮ್ಮನ್ನು ರಕ್ಷಿಸಿ ಪೊಲೀಸ್ ಅಂಕಲ್... ಬಾಲಕನ ವಿಡಿಯೋ ವೈರಲ್

By ETV Bharat Karnataka Team

Published : Sep 29, 2023, 7:58 PM IST

ಅಲಿಗಢ ಬಾಲಕನ ವಿಡಿಯೋ ವೈರಲ್

ಅಲಿಗಢ (ಉತ್ತರ ಪ್ರದೇಶ): ನನ್ನ ಕುಟುಂಬವನ್ನು ಅಮ್ಮನಿಂದ ರಕ್ಷಣೆ ಮಾಡಿ.. ಅಮ್ಮ ನನ್ನನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾಳೆ.. ಹೀಗೆಂದು ಮೂರು ವರ್ಷದ ಪುಟ್ಟ ಕಂದನೋರ್ವ ಪೊಲೀಸರ ಮೊರೆ ಹೋಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮತ್ತೊಂದೆಡೆ, ಈ ಬಗ್ಗೆ ಅಲಿಗಢ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ ತನಿಖೆಗೆ ಆದೇಶಿಸಿದ್ದಾರೆ.

ಇಲ್ಲಿನ ಬನ್ನಾ ದೇವಿ ಪೊಲೀಸ್ ಠಾಣೆ ವ್ಯಾಪ್ತಿಯ ಸುರಕ್ಷಾ ಬಿಹಾರ ಕಾಲೋನಿ ನಿವಾಸಿ ಅನ್ಶುಲ್ ಚೌಧರಿ ಹಾಗೂ ಡಿಂಪಲ್ ರಜಪೂತ್ ದಂಪತಿಯ ಮಗನೇ ತನ್ನ ಹೆತ್ತ ತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. 9 ವರ್ಷಗಳ ಹಿಂದೆ ಅನ್ಶುಲ್ ಹಾಗೂ ಡಿಂಪಲ್ ವಿವಾಹವಾಗಿದ್ದು, ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿದೆ. ಈ ಕೌಟುಂಬಿಕ ವಿವಾದದ ನಡುವೆ ಅಮಾಯಕ ಬಾಲಕ ತನ್ನ ತಾಯಿ ವಿರುದ್ಧ ದೂರಿರುವ ವೈರಲ್ ವಿಡಿಯೋ ಬಯಲಿಗೆ ಬಂದಿದೆ.

''ದಯವಿಟ್ಟು ಪೊಲೀಸ್ ಅಂಕಲ್, ನನ್ನ ಇಡೀ ಕುಟುಂಬವನ್ನು ಉಳಿಸಿ, ನಿಮ್ಮ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನಗೆ ಸಹಾಯ ಮಾಡಿ ಪೊಲೀಸ್ ಅಂಕಲ್. ನನ್ನ ಕುಟುಂಬವನ್ನು ಅಮ್ಮನಿಂದ ರಕ್ಷಿಸಿ. ಅಮ್ಮ ನನ್ನನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾಳೆ. ನನಗೆ ಮತ್ತು ನನ್ನ ತಂದೆಯನ್ನು ಪ್ರತಿದಿನ ಹೊಡೆಯುತ್ತಾರೆ. ಮುಂದುವರೆದು, ಅಮ್ಮ ನನ್ನ ಅಪ್ಪನಿಂದ ಮನೆಯಲ್ಲಿ ಪಾತ್ರೆಗಳನ್ನು ತೊಳೆಸುತ್ತಾರೆ. ಮನೆಯ ಎಲ್ಲ ಕೆಲಸಗಳನ್ನು ಮಾಡಿದ್ದಾರೆ. ಆಕೆ ತನ್ನ ತಂದೆಯನ್ನು ತುಂಬಾ ನಿಂದಿಸುತ್ತಾರೆ. ಅಪ್ಪನನ್ನು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಾರೆ'' ಎಂದು ಬಾಲಕ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಬಾಲಕನ ವಿಡಿಯೋ ಬೆಳಕಿಗೆ ಬಂದ ಬೆನ್ನಲ್ಲೇ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ತನಿಖೆ ಆದೇಶಿಸಿದ್ದಾರೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದು, ಇದು ಪತಿ-ಪತ್ನಿಯರ ನಡುವಿನ ಕೌಟುಂಬಿಕ ಕಲಹವಾಗಿದೆ. ಮಹಿಳೆ ತನ್ನ ಪತಿಯಿಂದ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಫೆಬ್ರವರಿ ತಿಂಗಳಿಂದ ಮಹಿಳೆ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಎರಡೂ ಕಡೆಯವರನ್ನು ಸಂಪರ್ಕಿಸಲಾಗಿದೆ. ಮಹಿಳಾ ಸಲಹಾ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಅನ್ಶುಲ್ ಚೌಧರಿ ಪ್ರತಿಕ್ರಿಯಿಸಿ, ನಮ್ಮದು ಪ್ರೇಮ ವಿವಾಹ. ಆದರೆ, ನನ್ನ ಮೇಲೆ ಹಲವು ಬಾರಿ ದಾಳಿ ನಡೆದಿದೆ. ಮನೋಜ್ ಗೌತಮ್ ಎಂಬಾತ ನನ್ನ ಮೇಲೆ ಹಲ್ಲೆ ನಡೆಸಿದ್ದು, ನನ್ನ ಪತ್ನಿ ಇದರಲ್ಲಿ ಭಾಗಿಯಾಗಿದ್ದಾಳೆ. ಫೆಬ್ರವರಿ 25ರಿಂದ ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟಿದ್ದೆ. ಅಲ್ಲದೇ, ವಿಚ್ಛೇದನ ಪ್ರಕರಣ ದಾಖಲಿಸಿದ ಬಳಿಕ ಆಕೆ ನನ್ನ ಮೇಲೆ ಮೂರು ಬಾರಿ ಹಲ್ಲೆ ನಡೆಸಿದ್ದಾಳೆ. ಈ ಕುರಿತು ಬನ್ನಾ ದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಮ್ಮ ಥಳಿಸುತ್ತಾರೆ.. ಊಟ ಕೇಳಿದರೂ ಹಾಕಲ್ಲ: ತಾಯಿ ವಿರುದ್ಧ ದೂರಲು ಠಾಣೆಗೆ ಬಂದ ಪುಟ್ಟ ಬಾಲಕ

ABOUT THE AUTHOR

...view details