ಕರ್ನಾಟಕ

karnataka

ETV Bharat / bharat

ಒಂದು ಹಣ್ಣಿಗೆ ಲಕ್ಷಗಟ್ಟಲೇ ಬೆಲೆ.. Z PLUS ಭದ್ರತೆಯ ನಡುವೆಯೂ ಮಾವಿನ ಹಣ್ಣುಗಳ ಕಳ್ಳತನ! - Z PLUS ಭದ್ರತೆಯ ನಡುವೆಯೂ ಮಾವಿನ ಹಣ್ಣುಗಳ ಕಳ್ಳತನ

ಮಧ್ಯಪ್ರದೇಶದ ಜಬಲ್ಪುಪುರದಲ್ಲಿ ಲಕ್ಷಾಂತರ ಬೆಲೆಬಾಳುವ ವಿದೇಶಿ ಮಾವುಗಳನ್ನು ಬೆಳೆಯಲಾಗುತ್ತಿದೆ. ಬಿಗಿಯಾದ ಭದ್ರತೆ ನಡುವೆಯೂ, ತೋಟಕ್ಕೆ ಭೇಟಿ ನೀಡಲು ಬಂದ ಕೆಲವು ಮಹಿಳೆಯರು ಮಾವಿನ ಹಣ್ಣುಗಳನ್ನು ಕದಿಯುತ್ತಿದ್ದಾರಂತೆ. ಇದು ತೋಟದ ಮಾಲೀಕರಿಗೆ ಭಾರಿ ನಷ್ಟವನ್ನುಂಟು ಮಾಡುತ್ತಿದೆ.

Miyazaki Mango Stolen despite Z plus security
ಮಾವಿನ ತೋಟವೊಂದಕ್ಕೆ Z PLUS ಭದ್ರತೆ

By

Published : Jul 10, 2022, 6:21 PM IST

ಜಬಲ್ಪುರ(ಮಧ್ಯಪ್ರದೇಶ):ಇಲ್ಲಿನ ಮಾವಿನ ತೋಟವೊಂದಕ್ಕೆ Z PLUS ಭದ್ರತೆಯನ್ನು ನೀಡಲಾಗಿದೆ. ಆದ್ರೂ ಕೂಡ ಈ ಮರದಲ್ಲಿನ ಮಾವಿನ ಹಣ್ಣನ್ನು ಮಾತ್ರ ಉಳಿಸಿಕೊಳ್ಳಲು ಆಗುತ್ತಿಲ್ಲ. ತೋಟದ ಮಾಲೀಕ ಅದರ ಭದ್ರತೆಗಾಗಿ 14 ವಿದೇಶಿ ತಳಿಯ ನಾಯಿಗಳು, ಮೂವರು ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಆದರೆ ಇದರ ಹೊರತಾಗಿಯೂ ತೋಟವನ್ನು ನೋಡಲು ಬರುವವರು ಮಾವಿನ ಹಣ್ಣುಗಳನ್ನು ಕದಿಯುತ್ತಿದ್ದಾರಂತೆ.

ಮಾವಿನ ತೋಟವೊಂದಕ್ಕೆ Z PLUS ಭದ್ರತೆ

ಬಿಗಿ ಭದ್ರತೆಯ ನಡುವೆಯೂ ಮಾವು ಕಳ್ಳತನ: ‘ಯಂಗ್​ ಆಫ್​ ಸನ್​​’ ಎಂದು ಕರೆಯಲ್ಪಡುವ ತೈಯೊ ನೋ ತಮಾಗೊ' ಮಾವು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ 2 ಲಕ್ಷದ 70 ಸಾವಿರ ರೂಪಾಯಿ. ಇದು ಜಪಾನ್‌ನ ಮಿಯಾಜಾಕಿ ನಗರದಲ್ಲಿ ಕಂಡುಬರುತ್ತದೆ. ಈ ಕಾರಣಕ್ಕಾಗಿ, ಈ ಮಾವಿಗೆ ಜಪಾನ್‌ನ ಮಿಯಾಜಾಕಿ ನಗರದ ಹೆಸರನ್ನೂ ಇಡಲಾಗಿದೆ. ಇದೀಗ ಮಧ್ಯಪ್ರದೇಶದ ಜಬಲ್ಪುರದಲ್ಲೂ ಇದನ್ನು ಬೆಳೆಯಲಾಗಿದೆ.

ಮಾವಿನ ಇಳುವರಿ ಕಡಿಮೆ: ಜಬಲ್ಪುರ ಜಿಲ್ಲಾ ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಹಿನೌಟಾ ಗ್ರಾಮದ ಶ್ರೀ ಮಹಾಕಾಳೇಶ್ವರ ಹೈಬ್ರಿಡ್ ಫಾರ್ಮ್‌ಹೌಸ್‌ನಲ್ಲಿ ಸಂಕಲ್ಪ್ ಸಿಂಗ್ ಪರಿಹಾರ್ ಅವರು ಈ ತಳಿಯ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ. ಇದರಲ್ಲಿ 3 ಸಾವಿರದ 600 ಸಸಿಗಳನ್ನು ನೆಡಲಾಗಿದೆ. ವಿಶೇಷವೆಂದರೆ ಇಲ್ಲಿ ಭಾರತದಲ್ಲಿ ಸಿಗುವ ಮಾವಿನ ತಳಿಗಳಲ್ಲದೇ ವಿದೇಶದಲ್ಲಿ ಸಿಗುವ ಸುಮಾರು 8 ತಳಿಯ ಗಿಡಗಳನ್ನು ನೆಡಲಾಗಿದೆ. ಇದರೊಂದಿಗೆ ಭಾರತದಲ್ಲಿ ಬೆಳೆಯುವ 50 ಬಗೆಯ ಮಾವಿನ ಗಿಡಗಳನ್ನೂ ಈ ಉದ್ಯಾನದಲ್ಲಿ ಬೆಳಸಲಾಗಿದೆ. ಆದ್ರೆ ಈ ಬಾರಿ ಮಾವಿನ ಗಿಡಗಳು ಸುಡು ಬಿಸಿಲನ್ನು ತಾಳದಿದ್ದರಿಂದ ಇಳುವರಿ ಕಡಿಮೆಯಾಗಿದೆ.

ಮಾವಿನ ಹಣ್ಣುಗಳ ಕಳ್ಳತನ

ತೋಟದ ಮಾಲೀಕ ಸಂಕಲ್ಪ್ ಸಿಂಗ್ ಮಾತನಾಡಿ, ಈ ಬಾರಿ ಜಪಾನ್‌ನ ಮಿಯಾಜಾಕಿ ಮಾವು ಹೆಚ್ಚು ಫಲ ನೀಡಿಲ್ಲ. ಕೇವಲ 15 ರಿಂದ 20 ಹಣ್ಣುಗಳು ಬಿಟ್ಟಿವೆ. ಆದರೆ ಇಂತಹ ಬಿಗಿ ಭದ್ರತೆಯ ಹೊರತಾಗಿಯೂ, ತೋಟಕ್ಕೆ ಭೇಟಿ ನೀಡಲು ಬಂದ ಮಹಿಳೆಯರು ಅವುಗಳನ್ನು ಕದಿಯುತ್ತಿದ್ದಾರೆ. ಅವರ ತೋಟವನ್ನು ನೋಡಲು ಸುತ್ತಮುತ್ತಲಿನ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಅದಕ್ಕಾಗಿಯೇ ಗಿಡಗಳ ಬಳಿ ಎಚ್ಚರಿಕೆ ಬೋರ್ಡ್‌ಗಳನ್ನು ಕೂಡ ಹಾಕಿರುವ ಅವರು, ತೋಟಕ್ಕೆ ಬರುವ ಜನರು ಕಪ್ಪು ಮಾವು, ಜಂಬೂ ಗ್ರೀನ್, ಮಿಯಾಜಾಕಿ ಮಾವುಗಳನ್ನು ನೋಡಿ ಮತ್ತು ಅವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದು. ಆದರೆ ಅದನ್ನು ಮುಟ್ಟಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬೆಳೆದು ನಿಂತ ಭತ್ತದಲ್ಲಿ ಅರಳಿದ ತಿರುವಳ್ಳುವರ್ ಆಕೃತಿ: ರೈತನ ಅದ್ಭುತ ಪ್ರಯತ್ನ

ಸಂಕಲ್ಪ್ ಸಿಂಗ್ ಹೇಳುವ ಪ್ರಕಾರ, ಕೆಲವು ದಿನಗಳ ಹಿಂದೆ ಕೆಲವು ಮಹಿಳೆಯರು ತಮ್ಮ ಮಕ್ಕಳೊಂದಿಗೆ ತೋಟಕ್ಕೆ ಭೇಟಿ ಬಂದಿದ್ದರಂತೆ. ಅವರು ಜಪಾನಿನ ಮಾವಿನ ಹಣ್ಣುಗಳಾದ ತೈಯೊ ನೋ ತಮಾಗೊವನ್ನು ಕದ್ದು, ಈ ಮಾವಿನ ಹಣ್ಣುಗಳನ್ನು ಒಡೆದು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡು ಹೋಗಿ ಕಾರಿನ ಕ್ಯಾಬಿನ್‌ನಲ್ಲಿ ಬಚ್ಚಿಟ್ಟಿದ್ದರಂತೆ. ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳಿಂದ ಮಹಿಳೆಯರ ಈ ಕೃತ್ಯ ಬೆಳಕಿಗೆ ಬಂದಿದೆಯಂತೆ.

ABOUT THE AUTHOR

...view details