ಮಿರ್ಜಾಪುರ (ಉತ್ತರ ಪ್ರದೇಶ): ಮೊಬೈಲ್ನ ಬ್ಯಾಟರಿ ಸ್ಫೋಟಿಸಿ 5ನೇ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಉತ್ತರಪ್ರದೇಶದ ಮಿರ್ಜಾಪುರ ಮಾಟ್ವಾರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಚಾರ್ಚ್ ಆಗಿದೆಯೇ ಎಂದು ನೋಡಲು ಬ್ಯಾಟರಿ ತೆಗೆದು ಅದನ್ನು ನಾಲಿಗೆಗೆ ಮುಟ್ಟಿಸಿ ಬಾಲಕ ಪರೀಕ್ಷಿಸಿದ್ದಾನೆ. ಈ ವೇಳೆ ಬ್ಯಾಟರಿ ಸ್ಫೋಟಿಸಿದೆ.