ಪಟಿಯಾಲ(ಪಂಜಾಬ್): ಪಟಿಯಾಲ ಜುತಿಶರ್‌ನ ಶೆರನ್‌ವಾಲಾ ಗೇಟ್‌ನಲ್ಲಿರುವ ಎಸ್‌ಬಿಐನ ಮುಖ್ಯ ಶಾಖೆಯ ನಿರ್ಬಂಧಿತ ಪ್ರದೇಶದಿಂದ 35 ಲಕ್ಷ ನಗದಿನೊಂದಿಗೆ ಬ್ಯಾಂಕ್ನಿಂದ ಬಾಲಕ ಪರಾರಿ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಡೀ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
35 ಲಕ್ಷ ನಗದಿನೊಂದಿಗೆ ಬ್ಯಾಂಕ್ನಿಂದ ಬಾಲಕ ಪರಾರಿ.. ವಿಡಿಯೋ - 35 ಲಕ್ಷ ನಗದು ಹಣದೊಂದಿಗೆ ಬಾಲಕ ಪರಾರಿ
ಪಟಿಯಾಲದ ಬ್ಯಾಂಕ್ವೊಂದರಲ್ಲಿ ಬಾಲಕನೊಬ್ಬ ನಿರ್ಬಂಧಿತ ಪ್ರದೇಶಕ್ಕೆ ತೆರಳಿ 35 ಲಕ್ಷ ನಗದು ಇದ್ದ ಬ್ಯಾಗ್ನೊಂದಿಗೆ ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
35 ಲಕ್ಷ ರೂ ನಗದಿನೊಂದಿಗೆ ಬ್ಯಾಂಕ್ನಿಂದ ಪರಾರಿಯಾದ ಬಾಲಕ
ಈ ಘಟನೆ ನಡೆದ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಅಲ್ಲಿಗೆ ಯಾರೂ ಹೋಗುವಂತಿಲ್ಲ. ಆದರೆ, ಅಲ್ಲಿಗೆ ಹೋಗಿರುವ ಬಾಲಕ ನಗದು ಹಣದೊಂದಿಗೆ ಓಡಿ ಹೋಗಿದ್ದಾನೆ. ಈ ಹಣವನ್ನು ಎಟಿಎಂಗಳಲ್ಲಿ ಹಾಕಲು ಇರಿಸಲಾಗಿತ್ತು ಎಂದು ಉದ್ಯೋಗಿಗಳು ತಿಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸ್ ತಂಡ ಬ್ಯಾಂಕ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಉಡುಪಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು