ಕರ್ನಾಟಕ

karnataka

ETV Bharat / bharat

ಶಿವಸೇನೆ ಸಂಸದೆ ಭಾವನಾಗೆ ಇಡಿ ಶಾಕ್ ​: ಐದು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ - ಮನಿ ಲಾಂಡರಿಂಗ್ ಕಾನೂನು

ಮಹಿಳಾ ಉತ್ಕರ್ಷ ಪ್ರತಿಷ್ಠಾನ ಹಾಗೂ ಜನಶಿಕ್ಷಣ ಸಂಸ್ಥೆ ಕಚೇರಿಗಳಲ್ಲಿ ಏಳು ಕೋಟಿ ರೂ. ಕಳ್ಳತನವಾಗಿದೆ ಎಂದು ಶಿವಸೇನೆಯ ಮಾಜಿ ಕಾರ್ಪೊರೇಟರ್​​ ಹರೀಶ್ ಸರ್ದಾ, ಬಿಜೆಪಿ ನಾಯಕ ಕಿರಿತ್​ ಸೋಮಯ್ಯಗೆ ಮಾಹಿತಿ ನೀಡಿದ್ದರು. ಕದ್ದ ಹಣವನ್ನು ಗುತ್ತಿಗೆದಾರರಿಂದ ತೆಗೆದುಕೊಂಡಿದ್ದಾರೆಯೇ ಎಂದು ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಜಿಲ್ಲೆಯಲ್ಲಿ ಮತ್ತೊಂದು ಸಂಚಲನ ಮೂಡಿಸಿತ್ತು..

ಭಾವನಾ ಗವಲಿ
ಭಾವನಾ ಗವಲಿ

By

Published : Aug 30, 2021, 7:14 PM IST

ಮುಂಬೈ (ಮಹಾರಾಷ್ಟ್ರ) :ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಸಂಸದೆ ಭಾವನಾ ಗವಲಿಯವರಿಗೆ ಸೇರಿದ ಐದು ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾನೂನು(ಪಿಎಂಎಲ್‌ಎ) ಅಡಿಯಲ್ಲಿ ಯಾವತ್ಮಾಲ್-ವಾಶಿಮ್‌ ಲೋಕಸಭಾ ಕ್ಷೇತ್ರದ ಸಂಸದೆಯ ಮನೆ, ಕಚೇರಿ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ, ಶೋಧ ನಡೆಸಲಾಗುತ್ತಿದೆ.

ಕೆಲ ದಿನಗಳ ಹಿಂದೆ ಭಾವನಾ ಗವಲಿ 100 ಕೋಟಿ ರೂಪಾಯಿ ಹಗರಣ ಮಾಡಿದ್ದಾರೆಂದು ಬಿಜೆಪಿ ಆರೋಪಿಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇಡಿ, ಭಾವನಾ ಗವಲಿಯವರ ಶಿಕ್ಷಣ ಸಂಸ್ಥೆಯ ಬಗ್ಗೆ ವಿಚಾರಣೆ ಆರಂಭಿಸಿತ್ತು.

ಮಹಿಳಾ ಉತ್ಕರ್ಷ ಪ್ರತಿಷ್ಠಾನ ಹಾಗೂ ಜನಶಿಕ್ಷಣ ಸಂಸ್ಥೆ ಕಚೇರಿಗಳಲ್ಲಿ ಏಳು ಕೋಟಿ ರೂ. ಕಳ್ಳತನವಾಗಿದೆ ಎಂದು ಶಿವಸೇನೆಯ ಮಾಜಿ ಕಾರ್ಪೊರೇಟರ್​​ ಹರೀಶ್ ಸರ್ದಾ, ಬಿಜೆಪಿ ನಾಯಕ ಕಿರಿತ್​ ಸೋಮಯ್ಯಗೆ ಮಾಹಿತಿ ನೀಡಿದ್ದರು. ಕದ್ದ ಹಣವನ್ನು ಗುತ್ತಿಗೆದಾರರಿಂದ ತೆಗೆದುಕೊಂಡಿದ್ದಾರೆಯೇ ಎಂದು ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಜಿಲ್ಲೆಯಲ್ಲಿ ಮತ್ತೊಂದು ಸಂಚಲನ ಮೂಡಿಸಿತ್ತು.

ಇದನ್ನೂ ಓದಿ: ಯೋಧರ ಮಧ್ಯೆ ಘರ್ಷಣೆ.. ಇಬ್ಬರು ಸೈನಿಕರಿಗೆ ಚಾಕು ಇರಿತ..

ಈ ಸಂಬಂಧ ಭಾವನಾ ಗವಲಿ ಸಂಸ್ಥೆಯ 11 ಜನರ ವಿರುದ್ಧ 2020ರ ಫೆಬ್ರವರಿ 2ರಂದು ರಿಸೋಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ABOUT THE AUTHOR

...view details