ಕರ್ನಾಟಕ

karnataka

ETV Bharat / bharat

ಬಾರ್ಸು ರಿಫೈನರಿ ಯೋಜನೆ: ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು: ಶರದ್ ಪವಾರ್

ರತ್ನಗಿರಿಯ ಬಾರ್ಸುನಲ್ಲಿನ ರಿಫೈನರಿ ಯೋಜನೆಗೆ ವಿರೋಧದ ನಡುವೆ ಕೈಗಾರಿಕೆ ಸಚಿವ ಉದಯ್ ಸಾಮಂತ್ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾದರು. ಈ ಸಭೆಯ ನಂತರ, ಎನ್‌ಸಿಪಿ ಅಧ್ಯಕ್ಷರು ಬಾರ್ಸು ಯೋಜನೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

Sharad Pawar
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್

By

Published : Apr 26, 2023, 6:39 PM IST

ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಕೊಂಕಣದಲ್ಲಿ ರಿಫೈನರಿ ವಿಚಾರವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್​ ಸಮರ ನಡೆಯುತ್ತಿದೆ. ರತ್ನಗಿರಿಯ ಬಾರ್ಸುನಲ್ಲಿನ ರಿಫೈನರಿ ಯೋಜನೆ ಕುರಿತು ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದೇ ವೇಳೆ ಶರದ್ ಪವಾರ್, ಕೈಗಾರಿಕಾ ಸಚಿವ ಉದಯ್ ಸಾಮಂತ್ ಭೇಟಿ ಹಾಗೂ ಬಾರ್ಸು ರಿಫೈನರಿ ಯೋಜನೆ ಸೇರಿದಂತೆ ಇತರ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಅವರ ಪಾತ್ರದ ಕುರಿತು ಪ್ರತಿಕ್ರಿಯಿಸಿದರು. ಜೊತೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಈ ವಿಚಾರವಾಗಿ ಶರದ್ ಪವಾರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದಾರೆ.

ಪ್ರತಿಭಟನಕಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು-ಶರದ್ ಪವಾರ್:ಬಾರ್ಸು ಯೋಜನೆ ಕುರಿತು ಮಾತನಾಡಿದ ಅಧ್ಯಕ್ಷ ಶರದ್ ಪವಾರ್, ''ಯಾವುದೇ ಯೋಜನೆ ನಡೆಯುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೂಡಲೇ ಬಾರ್ಸು ವಿರೋಧಿಗಳ ಸಭೆ ನಡೆಸಬೇಕು. ಸಚಿವ ಸಮಂತ್ ಸಂಸ್ಕರಣಾಗಾರವನ್ನು ಪರಿಶೀಲಿಸಿದ್ದಾರೆ. ಪ್ರತಿಭಟನಾಕಾರರ ವಿರೋಧ ಏನೆಂಬುದನ್ನು ಅರಿತುಕೊಂಡು ದಾರಿ ಕಂಡುಕೊಳ್ಳಬೇಕಿದೆ. ವಿರೋಧ ಏಕೆ ಎಂದು ನಿಖರವಾಗಿ ಅರ್ಥಮಾಡಿಕೊಳ್ಳಬೇಕಿದೆ. ಬಾರ್ಸು ಯೋಜನೆ ವಿರುದ್ಧದ ಪ್ರತಿಭಟನಾಕಾರರನ್ನು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕರ ಭಾವನೆಗೆ ಗೌರವ ನೀಡಬೇಕು. ನಾಳೆ ರಿಫೈನರಿ ವಿರೋಧಕ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದೆ. ಸ್ಥಳೀಯರನ್ನು ನಂಬಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ವಿರೋಧಕ್ಕೆ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು'' ಎಂದು ತಿಳಿಸಿದರು.

ಇದನ್ನೂ ಓದಿ:ಪುತ್ರ ಸಂತಾನಕ್ಕಾಗಿ ವಿದ್ಯಾರ್ಥಿನಿ ಮೇಲೆ ಪ್ರಾಧ್ಯಾಪಕನ ದೌರ್ಜನ್ಯ ಆರೋಪ: ಅತ್ಯಾಚಾರ ಕೇಸ್​ ದಾಖಲು

ಬಾರ್ಸುಗೆ ಹೋಗುವುದಿಲ್ಲ- ಪವಾರ್:''ಇನ್ನು ಮುಂದೆ ರಾಜ್ಯದಲ್ಲಿ ಯಾವುದಾದರೂ ಯೋಜನೆ ರೂಪಿಸಬೇಕಿದ್ದರೆ, ಆ ಯೋಜನೆಯೇ ಮುಖ್ಯವಾಗಿದ್ದರೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು'' ಎಂದು ಹೇಳಿದ ಪವಾರ್, ಸ್ಥಳೀಯರ ಭಾವನೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಮಾರ್ಗ ಕಂಡುಕೊಳ್ಳಬೇಕು. ನಾನು ಕೈಗಾರಿಕಾ ಸಚಿವರಿಂದ ಬಾರ್ಸು ರಿಫೈನರಿಯನ್ನು ಪರಿಶೀಲಿಸಿದ್ದೇನೆ. ಬಾರ್ಸುನಲ್ಲಿ ಭೂ ಸರ್ವೆ ನಡೆಯುತ್ತಿದೆ. ಪ್ರತಿಭಟನಾಕಾರರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಮಾಧ್ಯಮದಿಂದ ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ, ನಾನು ಬಾರ್ಸುಗೆ ಹೋಗುವುದಿಲ್ಲ'' ಎಂದರು.

ಇದನ್ನೂ ಓದಿ:ಪೆರೋಲ್​ ಅವಧಿ ಮುಕ್ತಾಯ: ಮತ್ತೆ ಜೈಲು ಸೇರಿದ ಬಿಹಾರದ ಮಾಜಿ ಸಂಸದ ಆನಂದ್ ಮೋಹನ್‌

ಮುಖ್ಯಮಂತ್ರಿ ಬದಲಾವಣೆ ಕುರಿತು ನನಗೆ ಗೊತ್ತಿಲ್ಲ:ಅಜಿತ್ ಪವಾರ್ ಅವರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕೇಳಿದಾಗ ಪ್ರಶ್ನೆಗೆ ಉತ್ತರಿಸಿದ ಪವಾರ್ ಅವರು, ''ಅಂತಹ ಹುಚ್ಚುತನವನ್ನು ಮಾಡಬೇಡಿ ಎಂದು ನಾನು ಅವರಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಆದರೆ, ರಾಜ್ಯದ ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದು ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಪವಾರ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಎನ್‌ಸಿಇಆರ್‌ಟಿ ಕೈಬಿಟ್ಟಿರುವ ಪಠ್ಯ ಕೇರಳದಲ್ಲಿ ಬೋಧನೆ: ಶಿಕ್ಷಣ ಸಚಿವ ಶಿವನ್‌ಕುಟ್ಟಿ

ABOUT THE AUTHOR

...view details