ಶ್ರೀನಗರ (ಜಮ್ಮು ಕಾಶ್ಮೀರ):ಪಕ್ಷದಲ್ಲಿನ ಬಿಕ್ಕಟ್ಟಿನ ಮಧ್ಯೆಯೇ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತನ್ನ ಅಧ್ಯಕ್ಷೆ ಮೆಹಬೂಬಾ ಮುಫ್ತಿಯನ್ನು ಮೂರನೇ ಬಾರಿಗೆ ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ.
ಪಿಡಿಪಿ ವಕ್ತಾರ ಸುಹೇಲ್ ಬುಖಾರಿ ಇ ಬಗ್ಗೆ ಮಾಹಿತಿ ನೀಡಿ, ಮೆಹಬೂಬಾ ಮುಫ್ತಿ ಮೂರು ವರ್ಷಗಳ ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಶ್ರೀನಗರದ ಗುಪ್ಕರ್ ಪ್ರದೇಶದ ಮೆಹಬೂಬಾ ಮುಫ್ತಿಯ ಫೇರ್ ವ್ಯೂ ಸರ್ಕಾರಿ ನಿವಾಸದಲ್ಲಿ ಚುನಾವಣೆ ನಡೆಯಿತು.