ಶ್ರೀನಗರ(ಜಮ್ಮು&ಕಾಶ್ಮೀರ): ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬಾಲಿವುಡ್ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಅವರ ಟೀಕೆಯ ಬಗ್ಗೆ ಪ್ರತಿಕ್ರಿಯಸಿದ್ದಾರೆ.
‘ಕೊನೆಗೂ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ಪ್ರಚಾರಕ್ಕಾಗಿ ಮಾಡಿದ ಚಲನಚಿತ್ರ ಎಂದು ಕರೆದಿದ್ದಾರೆ. ಆಡಳಿತ ಪಕ್ಷವು ಮುಸ್ಲಿಮರನ್ನು ರಾಕ್ಷಸರಂತೆ ತೊರಿಸಿದ್ದಾರೆ ಮತ್ತು ಪಂಡಿತರ ನಡುವೆ ಇರುವ ಕಂದಕವನ್ನು ವಿಸ್ತರಿಸುವ ಹಾಗೇ ಸಂಪೂರ್ಣ ಪ್ರಚಾರದ ಸಿನಿಮಾವಾಗಿದೆ. ಸತ್ಯ ಮರೆಮಾಚಲು ರಾಷ್ಟ್ರೀಯ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿರುವುದು ದುಃಖಕರವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಮುಸ್ಲಿಮರನ್ನು ರಾಕ್ಷಸರಂತೆ ತೋರಿಸಿದೆ: ಮೆಹಬೂಬ್ ಮುಪ್ತಿ ಭಾನುವಾರ, ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂತಾರಾಷ್ಟ್ರೀಯ ತೀರ್ಪುಗಾರರ ಮುಖ್ಯಸ್ಥ ಲ್ಯಾಪಿಡ್, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರಿ ಫೈಲ್ಸ್' ಚಲನಚಿತ್ರವನ್ನು "ಪ್ರಚಾರ ಮತ್ತು ಅಸಭ್ಯ" ಎಂದು ಚಲನ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಹೇಳಿದರು. ಚಿತ್ರದ ಪ್ರದರ್ಶನದಲ್ಲಿ ತೀರ್ಪುಗಾರರು "ವಿಚಲಿತರಾದರು ಮತ್ತು ಆಘಾತಕ್ಕೊಳಗಾಗಿದ್ದಾರೆ" ಎಂದು ಲ್ಯಾಪಿಡ್ ತಿಳಿಸಿದರು.
"ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಮತ್ತು ಪ್ರಚಾರಕ ಚಲನ ಚಿತ್ರದಂತೆ ನಮಗೆ ತೋರುತ್ತಿದೆ" ಎಂದು ತೀರ್ಪುಗಾರ ಲ್ಯಾಪಿಡ್ ತಿಳಿಸಿದರು.
ಇದನ್ನೂ ಓದಿ:ಭಯೋತ್ಪಾದನೆ ಪ್ರಕರಣ: ಐವರು ಜೈಶ್ ಉಗ್ರರಿಗೆ ಜೀವಾವಧಿ ಶಿಕ್ಷೆ, ಓರ್ವನಿಗೆ 5 ವರ್ಷ ಸಜೆ