ಕರ್ನಾಟಕ

karnataka

ETV Bharat / bharat

ಪುರಸಭೆ ಚುನಾವಣೆಯಲ್ಲಿ ಗೆದ್ದ ಆಸ್ಪತ್ರೆ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಹಿಳೆ

ನಾಲ್ಕು ರಾಷ್ಟ್ರೀಯ ಮತ್ತು ಮೂರು ರಾಜ್ಯ ಮಟ್ಟದ ಹ್ಯಾಂಡ್​ ಬಾಲ್​ ಸ್ಪರ್ಧೆಗಳಲ್ಲಿ ಭಾಗವಹಿಸಿ, ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಕೆಲಸಮಾಗುತ್ತಿದ್ದ ಮಹಿಳೆ ಹಿಮಾಚಲ ಪ್ರದೇಶದಲ್ಲಿ ಪುರಸಭೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ

sanitation worker of Himachal hospital who won municipal election
ಬಿಜೆಪಿಯಿಂದ ಸ್ಫರ್ಧಿಸಿ ಪುರಸಭೆ ಚುನಾವಣೆಯಲ್ಲಿ ಗೆಲುವು

By

Published : Jan 14, 2021, 10:43 AM IST

ಬಿಲಾಸ್ಪುರ (ಹಿಮಾಚಲ ಪ್ರದೇಶ):ಹಿಮಾಚಲ ಪ್ರದೇಶದ ಬಿಲಾಸ್ಪುರ ಡಿಹೆಚ್‌ಹೆಚ್ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನರೇಶ್ ಕುಮಾರಿ ಪುರಸಭೆ ಚುನಾವಣೆಯಲ್ಲಿ ಜಯಗಳಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಕುಮಾರಿ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಆಟಗಾರ್ತಿಯಾಗಿದ್ದು, ತನ್ನ ಉತ್ಸಾಹವನ್ನು ತೊರೆದು ಬಿಲಾಸ್ಪುರ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸಗಾರಳಾಗಿ ಕೆಲಸ ಮಾಡುತ್ತಿದ್ದಳು. ಬಿಲಾಸ್ಪುರ ಜಿಲ್ಲೆಯ ವಾರ್ಡ್ ನಂಬರ್ ಒನ್ ನಿವಾಸಿ ನರೇಶ್ ಕುಮಾರಿ ಬಗ್ಗೆ ಬಿಜೆಪಿ ಮೊದಲ ಬಾರಿಗೆ ವಿಶ್ವಾಸ ವ್ಯಕ್ತಪಡಿಸಿತು. ನಾಮಪತ್ರ ಸಲ್ಲಿಸಿದ ನಂತರ, ಕುಮಾರಿ ಮೊದಲು ಆಸ್ಪತ್ರೆಯಲ್ಲಿ ತನ್ನ ಕೆಲಸವನ್ನು ಮಾಡುತ್ತಿದ್ದರು. ನಂತರ ಅವಳು ಕ್ಯಾಂಪೇನ್​ನಲ್ಲಿ ಭಾಗವಹಿಸುತ್ತಿದ್ದರು.

ಈ ಬಗ್ಗೆ ಈ ಟಿವಿ ಭಾರತ್ ಜೊತೆ ಮಾತನಾಡಿದ ಕುಮಾರಿ, "ನಾನು ಸಾರ್ವಜನಿಕರ ಬೆಂಬಲದೊಂದಿಗೆ ಇಂದು ಕೌನ್ಸಿಲರ್ ಆಗಿದ್ದರೂ, ಆಸ್ಪತ್ರೆಯಲ್ಲಿ ನೈರ್ಮಲ್ಯ ಕೆಲಸಗಾರಳಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ನನ್ನ ಕೆಲಸದ ಕಾರಣದಿಂದಾಗಿ ಇದು ಸಾಧ್ಯವಾಗಿದ್ದು, ಈಗ ನಾನು ಎರಡೂ ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡುತ್ತೇನೆ" ಎಂದಿದ್ದಾರೆ.

"ನನ್ನ ವಾರ್ಡ್‌ನ ವ್ಯಾಪ್ತಿಯ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಮುದಾಯಕ್ಕಾಗಿ ಮತ್ತು ಇಡೀ ವಾರ್ಡ್ ನಿವಾಸಿಗಳಿಗಾಗೆ ನಾನು ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ.

ನರೇಶ್ ಕುಮಾರಿ ಅವರ ಜೀವನದ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಅವರ ಪತಿ 2017 ರಲ್ಲಿ ನಿಧನರಾದರು. ಅಂತಹ ಪರಿಸ್ಥಿತಿಯಲ್ಲಿ, ಇಡೀ ಕುಟುಂಬದ ಜವಾಬ್ದಾರಿ ಅವಳ ಮೇಲೆ ಬಿದ್ದಿತ್ತು. ಪತಿ ನಿಧನದ ನಂತರ ಅವರು ತಮ್ಮ ಮಕ್ಕಳೊಂದಿಗೆ ಜಿಲ್ಲಾ ಮಾರುಕಟ್ಟೆಗೆ ಹೋಗುತ್ತಿದ್ದೆ ಎಂದು ನರೇಶ್ ಕುಮಾರಿ ಹೇಳಿದ್ದಾರೆ. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ, ತನ್ನ ಮಕ್ಕಳನ್ನು ಓದಿಸಿ, ಕುಟುಂಬವನ್ನು ಪೋಷಿಸಿದ್ದರು..

ನರೇಶ್ ಕುಮಾರಿ ಮಾಜಿ ರಾಷ್ಟ್ರೀಯ ಹ್ಯಾಂಡ್‌ಬಾಲ್ ಆಟಗಾರ್ತಿಯೂ ಆಗಿದ್ದಾರೆ. ಅವರು ನಾಲ್ಕು ರಾಷ್ಟ್ರೀಯ ಮತ್ತು ಮೂರು ರಾಜ್ಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದಾರೆ.

ABOUT THE AUTHOR

...view details