ಮೀರತ್: ಉತ್ತರಪ್ರದೇಶದ ಮೀರತ್‌ನಲ್ಲಿ ಕೊರೊನಾ ಸೋಂಕು ದಿನೇ ದಿನೆ ಏರಿಕೆಯಾಗುತ್ತಿದೆ. ಈ ಮಧ್ಯೆ 21 ದಿನಗಳ ಹಸುಗೂಸು ಕೊರೊನಾ ವಿರುದ್ಧ ಹೋರಾಡಿ ಜಯಗಳಿಸಿದೆ.
21 ದಿನಗಳ ಹೆಣ್ಣುಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಮೀರತ್ನ ನ್ಯೂಟ್ರಿಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರ ತಂಡ ಬಾಲಕಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿ 18 ದಿನಗಳಲ್ಲಿ, ಶಿಶು ಕೊರೊನಾದಿಂದ ಗುಣಮುಖವಾಗಿದೆ.
ಸದ್ಯ ಮಗು ಆರೋಗ್ಯವಾಗಿದೆ. ಇನ್ನು ಕಂದಮ್ಮ ಕೊರೊನಾದಿಂದ ಗುಣಮುಖವಾಗಿದ್ದನ್ನು ಕಂಡ ಪೋಷಕರು ಸಂತೋಷಪಟ್ಟಿದ್ದಾರೆ. ಮಗುವಿನ ಚೇತರಿಕೆಯ ಕಾರಣ, ಅವರ ಸ್ಥೈರ್ಯವೂ ಹೆಚ್ಚಾಗಿದೆ. ಪ್ರಸ್ತುತ, ಕುಟುಂಬ ಸದಸ್ಯರು ಮಗುವನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದೊಯ್ದಿದ್ದಾರೆ.
ಇನ್ನೊಂದು ರೀತಿಯ ಘಟನೆ ಮೀತರ್ನ ಆಸ್ಪತ್ರೆಯಲ್ಲಿ ನಡೆದಿದೆ. ನಿತಿನ್ ಮತ್ತು ಪಾರುಲ್ ಎಂಬುವರ ವಿವಾಹ ವಾರ್ಷಿಕೋತ್ಸವ ಮೇ 16 ರಂದು ಇತ್ತು. ಆದರೆ, ಕೊರೊನಾದಿಂದ ಆಚರಣೆ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರು ಕೇಕ್ ಕತ್ತರಿಸಿ ದಂಪತಿಗಳ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಅಷ್ಟೇ ಅಲ್ಲದೆ, ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ.