ವಿಜಯನಗರಂ (ಆಂಧ್ರಪ್ರದೇಶ): ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಮೆಂಟದ ಮಂಡಲದ ಜಕ್ಕುವಾ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ (Massive fire broke out ) ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.
watch video: ಜಕ್ಕುವಾ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ - ಆಂಧ್ರಪ್ರದೇಶ ಅಗ್ನಿ ಅವಘಡ
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಮೆಂಟದ ಮಂಡಲದ ಜಕ್ಕುವಾ ಗ್ರಾಮದಲ್ಲಿ ಭಾರಿ ಅಗ್ನಿ ದುರಂತ (Massive fire broke out ) ಸಂಭವಿಸಿದ್ದು, ಪರಿಣಾಮ 35 ಮನೆಗಳು ಸುಟ್ಟು ಕರಕಲಾಗಿವೆ.
ನಿನ್ನೆ ರಾತ್ರಿ ಜಕ್ಕುವಾ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸುಮಾರು 35 ಮನೆಗಳು ಸುಟ್ಟು ಕರಕಲಾಗಿವೆ. ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ (cylinder leak) ಬೆಂಕಿ ಕಾಣಿಸಿಕೊಂಡಿದ್ದು, ನಂತರ ಹಲವು ಮನೆಗಳಿಗೆ ತಗುಲಿದೆ ಎಂದು ಅಂದಾಜಿಸಲಾಗಿದೆ. ಘಟನೆಯಿಂದ ಸುಮಾರು 20 ಲಕ್ಷ ರೂಪಾಯಿ ಆಸ್ತಿ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಪಡಿತರ ಚೀಟಿ, ಪಾಸ್ ಪುಸ್ತಕ ಸೇರಿದಂತೆ ಇತರ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆ ಕಳೆದುಕೊಂಡವರಿಗೆ ಸ್ಥಳೀಯ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ. ಜೊತೆಗೆ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿಜಯನಗರಂ ಜಿಲ್ಲಾಧಿಕಾರಿ ಸೂರ್ಯ ಕುಮಾರಿ ತಿಳಿಸಿದ್ದಾರೆ.