ಮುಂಬೈ (ಮಹಾರಾಷ್ಟ್ರ): ಮುಂಬೈನ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಪಕ್ಕದಲ್ಲಿರುವ ಚಿತ್ರಕೂಟ ಮೈದಾನದಲ್ಲಿ ಹಾಕಲಾಗಿದ್ದ ಫಿಲ್ಮ್ ಸೆಟ್ನಲ್ಲಿ ಅಗ್ನಿ ಅವಘಡ ಸಂಭವಿಸಿ, ಒಬ್ಬ ಮೃತಪಟ್ಟಿದ್ದಾನೆ.
ರಾಜಶ್ರೀ ಪ್ರೊಡಕ್ಷನ್ಸ್ನ ಒಂದು ಮತ್ತು ನಿರ್ದೇಶಕ ಲವ್ ರಂಜನ್ ಅವರ ಹೊಸ ಚಿತ್ರದ ಎರಡು ಸೆಟ್ಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದು ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಮನೀಶ್ ದೇವಶಿ (32) ಅವರನ್ನು ಸ್ಥಳೀಯ ಆಸ್ಪತ್ರೆ ಸಾಗಿಸಲಾಯಿತಾದರೂ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು. ರಂಜನ್ ಅವರ ಸೆಟ್ನಲ್ಲಿ ಸೆಟ್ ಲೈಟಿಂಗ್ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದುಬೆ ಅವರು ಹೇಳಿದ್ದಾರೆ.
ಫಿಲ್ಮ್ ಸೆಟ್ನಲ್ಲಿ ಶುಕ್ರವಾರ ಸಂಜೆ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ನಂತರ ಚಿತ್ರದ ಸೆಟ್ನಲ್ಲಿ ಈ ಘಟನೆ ನಡೆದಿದೆ ಎಂದು ಖಚಿತಪಡಿಸಿದರು.
ಮುಂಬೈ: ಫಿಲ್ಮ್ ಸೆಟ್ನಲ್ಲಿ ಅಗ್ನಿ ಅವಘಡ, ದಟ್ಟ ಹೊಗೆ ಈ ಅಗ್ನಿಅವಘಡದಿಂದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಇದರಿಂದ ಮೂರು ಅಗ್ನಿಶಾಮಕ ವಾಹನಗಳ ಸಮೇತ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿಯನ್ನು ನಂದಿಸಿದರು. ಇನ್ನು, ಭಾರಿ ಹೊಗೆ ಕಾಣಿಸಿಕೊಂಡಿದ್ದರಿಂದ ರಸ್ತೆಯಲ್ಲಿ ಹೋಗುತ್ತಿದ್ದ ಜನರು ನಿಂತು ತಮ್ಮ ಮೊಬೈಲ್ಗಳಲ್ಲಿ ಬೆಂಕಿಯ ದೃಶ್ಯಗಳನ್ನು ಸೆರೆ ಹಿಡಿದುಕೊಂಡರು.
ತಡರಾತ್ರಿವರೆಗೂ ಅಗ್ನಿಶಾಮಕ ದಳಗಳು ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದವು.
ಇದನ್ನೂ ಓದಿ:ಟಿ-20 ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಬಾಂಬ್ ಸ್ಫೋಟ.. ನಾಲ್ವರಿಗೆ ಗಾಯ