ಕರ್ನಾಟಕ

karnataka

ETV Bharat / bharat

ವಿದೇಶಿ ಮಹಿಳೆಯ ಬಂಧನ: 30 ಕೋಟಿ ರೂ.ಮೌಲ್ಯದ ಹೆರಾಯಿನ್ ಜಪ್ತಿ - ಕೇರಳದಲ್ಲಿ ಹೆರಾಯಿನ್ ಜಪ್ತಿ

ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಯ ಬಂಧನವಾಗಿದ್ದು, ಆಕೆಯಿಂದ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಲಾಗಿದೆ.

Massive drug bust in Calicut Airport ; Foreign woman arrested with Rs 30 crore worth of heroin
ವಿದೇಶಿ ಮಹಿಳೆಯ ಬಂಧನ: 30 ಕೋಟಿ ರೂ.ಮೌಲ್ಯದ ಹೆರಾಯಿನ್ ಜಪ್ತಿ

By

Published : Sep 23, 2021, 4:35 AM IST

ಮಲಪ್ಪುರಂ, ಕೇರಳ:ಹೆರಾಯಿನ್ ಸಾಗಿಸುತ್ತಿದ್ದ ಆರೋಪದ ಮೇಲೆ ಓರ್ವ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದ್ದು, ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ಜಪ್ತಿ ಮಾಡಲಾಗಿದೆ.

ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯ ಬಂಧನವಾಗಿದೆ. 31 ವರ್ಷದ ಬಿಶಾಲಾ ಸೋಕೋ ಬಂಧಿತ ಮಹಿಳೆಯಾಗಿದ್ದಾಳೆ. ಜಾಂಬಿಯಾ ದೇಶದ ಬಿಶಾಲಾ ಸುಮಾರು 5 ಕೆಜಿ ಹೆರಾಯಿನ್ ಅನ್ನು ಸಾಗಿಸಲು ಯತ್ನಿಸುತ್ತಿದ್ದಳು.

ಕೀನ್ಯಾದ ನೈರೋಬಿ ವಿಮಾನ ನಿಲ್ದಾಣದಿಂದ ಕತಾರ್ ಏರ್​ವೇಸ್ ವಿಮಾನದ ಮೂಲಕ ಬುಧವಾರ ಬೆಳಗ್ಗೆ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಯ ಲಗೇಜು ತಪಾಸಣೆ ಮಾಡಿದಾಗ ಹೆರಾಯಿನ್ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಮಹಿಳೆಯನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಗುಜರಾತ್​ನಲ್ಲಿ ಒಂದು ಮಾದಕ ದ್ರವ್ಯ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್ ಆಗಿದ್ದು, ಆ ಗ್ಯಾಂಗ್​​ನೊಂದಿಗೆ ಈ ಮಹಿಳೆಯ ಸಂಪರ್ಕ ಹೊಂದಿದ್ದಳಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಶೀಲ ಶಂಕಿಸಿ, ಚಾಕುವಿನಿಂದ ಹೆಂಡತಿ‌ ಕತ್ತು ಸೀಳಿದ ಗಂಡ..!

ABOUT THE AUTHOR

...view details