ಕರ್ನಾಟಕ

karnataka

ETV Bharat / bharat

ಪಂಜಾಬ್​ನ ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ಸ್ಫೋಟ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ - ಪಂಜಾಬ್​ನ ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ಬ್ಲಾಸ್ಟ್​

Explosion in district court of Ludhiana: ಪಂಜಾಬ್​ನ ಲುಧಿಯಾನ ಜಿಲ್ಲಾ ನ್ಯಾಯಾಲಯದ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ.

Explosion in district court of Ludhiana
ಲುಧಿಯಾನ ಜಿಲ್ಲಾ ನ್ಯಾಯಾಲಯ

By

Published : Dec 23, 2021, 1:00 PM IST

Updated : Dec 23, 2021, 2:20 PM IST

ಲುಧಿಯಾನ (ಪಂಜಾಬ್)​: ಪಂಜಾಬ್​ನ ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ಭಾರಿ​ ಸ್ಫೋಟ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಮಹಿಳೆ ಸೇರಿದಂತೆ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ಸ್ಫೋಟ

ಕೋರ್ಟ್​ನ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಇತರ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕಿಡಿಗೇಡಿಗಳಿಂದ ಸಂತ ಆಂಟೋನಿ ವಿಗ್ರಹಕ್ಕೆ ಹಾನಿ

ಸ್ಥಳಕ್ಕೆ ಚಂಡೀಗಢದಿಂದ ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಂಡ ಕೂಡ ಬಂದಿದ್ದು, ಚಂಡೀಗಢದ ಎನ್‌ಐಎ ಶಾಖೆಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ ಇಬ್ಬರು ಸದಸ್ಯರ ತಂಡ ಲುಧಿಯಾನಕ್ಕೆ ಧಾವಿಸುತ್ತಿದೆ.

Last Updated : Dec 23, 2021, 2:20 PM IST

ABOUT THE AUTHOR

...view details