ಕಾನ್ಪುರ:ವಿವಾಹಿತ ಮಹಿಳೆಯೊಬ್ಬರು ಅತ್ತೆ ಮನೆ ಮುಂದೆ ಧರಣಿ ಮಾಡುವ ಜೊತೆಗೆ ಏಣಿ ಬಳಸಿ ಅದನ್ನು ಹತ್ತಿ ಮನೆಗೆ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅತ್ತೆ ಮನೆಯವರು ಥಳಿಸಿ, ಮನೆಗೆ ಬರಲು ಬಿಡುತ್ತಿಲ್ಲ ಎಂದು ವಿವಾಹಿತ ಮಹಿಳೆ ಆರೋಪಿಸಿದ್ದಾರೆ.
ಅತ್ತೆ-ಮಾವ ಆಕೆ ಜೊತೆ ಗಲಾಟೆ ಮಾಡಿರುವ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿದೆ. ಇದರ ವಿಚಾರಣೆ ನಡೆಯುತ್ತಿದೆ. ವಿವಾಹಿತ ಮಹಿಳೆ ಹಲವು ತಿಂಗಳಿನಿಂದ ಅತ್ತೆಯ ಮನೆಗೆ ಬಂದಿರಲಿಲ್ಲ. ನೌಬಸ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಹಂಸಪುರಂದ ದೀಪಿಕಾ ಚೌಹಾಣ್, ವಂಶವರ್ಧನ್ ಸಿಂಗ್ ಚೌಹಾಣ್ ಅವರನ್ನು ವಿವಾಹವಾಗಿದ್ದರು.
ಮದುವೆಯಾದ ಕೆಲವು ದಿನಗಳ ನಂತರ ಇಬ್ಬರಿಗೂ ಪರಸ್ಪರ ಹೊಂದಾಣಿಕೆಯಾಗಲಿಲ್ಲ. ಇದರಿಂದಾಗಿ ಇಬ್ಬರ ಸಂಬಂಧ ಹಳಸತೊಡಗಿದೆ. ಮತ್ತೊಂದೆಡೆ, ವರದಕ್ಷಿಣೆಗಾಗಿ ಅತ್ತೆ-ಮಾವಂದಿರು ತನಗೆ ಹಿಂಸೆ ನೀಡುತ್ತಿದ್ದರು ಮತ್ತು ಪತಿಯು ನನಗೆ ಹೆಂಡತಿಯ ಸ್ಥಾನಮಾನವನ್ನು ಎಂದಿಗೂ ನೀಡಲಿಲ್ಲ ಎಂದು ದೀಪಿಕಾ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.