ಇಂಫಾಲ (ಮಣಿಪುರ):ಅಬ್ಬಬ್ಬಾ ಅಂದ್ರೆ ಒಂದು ನಿಮಿಷದಲ್ಲಿ ಒಬ್ಬ ವ್ಯಕ್ತಿ 50 ರಿಂದ 60 ಪುಶ್-ಅಪ್ ಮಾಡಬಹುದು. ಆದ್ರೆ ಇಲ್ಲೋರ್ವ ಯುವಕ ಕೇವಲ ಒಂದೇ ಒಂದು ನಿಮಿಷದ ಅವಧಿಯಲ್ಲಿ ಬರೋಬ್ಬರಿ 109 ಪುಶ್-ಅಪ್ ಹೊಡೆದು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾನೆ.
ಹೌದು, 24 ವರ್ಷದ ಮಣಿಪುರದ ತೌನೋಜಮ್ ನಿರಂಜೋಯ್ ಸಿಂಗ್ ಎಂಬ ಯುವಕ ಹೊಸ ದಾಖಲೆ ನಿರ್ಮಿಸಿದ್ದಾನೆ. ಈ ಹಿಂದೆ ಎರಡು ಬಾರಿ ಗಿನ್ನೆಸ್ ದಾಖಲೆ ಬರೆದಿದ್ದ ನಿರಂಜೋಯ್ ಸಿಂಗ್, ಒಂದು ನಿಮಿಷದಲ್ಲಿ 109 ಪುಶ್-ಅಪ್‌ಗಳನ್ನು ಮಾಡುವ ಮೂಲಕ ಒಂದೇ ನಿಮಿಷದಲ್ಲಿ 105 ಪುಶ್-ಅಪ್ ಮಾಡಿದ್ದ ದಾಖಲೆಯನ್ನು ಮುರಿದಿದ್ದಾನೆ. ಮಣಿಪುರ ಅಜ್ಟೆಕ್ಸ್ ಸ್ಪೋರ್ಟ್ಸ್ ಸಂಸ್ಥೆ, ಇಂಫಾಲ್‌ನ ಅಜ್ಟೆಕ್ಸ್ ಫೈಟ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಪರ್ಧೆಯಲ್ಲಿ ಯುವಕ ಈ ಸಾಧನೆ ಮಾಡಿದ್ದಾನೆ.