ತೇಜ್‌ಪುರ (ಅಸ್ಸಾಂ):''ರಾಜ್ಯ ಸರ್ಕಾರವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಿಂಸಾಚಾರದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮಣಿಪುರದ ಪೆರಿಫೆರಿ ಪ್ರದೇಶ ಮತ್ತು ಮಣಿಪುರದ ಮೂರು ಹಾಟ್‌ಸ್ಪಾಟ್ ಇಂಫಾಲ್, ಚುರಾಚಂದ್‌ಪುರ ಮತ್ತು ಮೋರ್ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ'' ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ. ಮೇಘಚಂದ್ರ ಸಿಂಗ್ ಹೇಳಿದರು. ಈಟಿವಿ ಭಾರತ ಹಿರಿಯ ವರದಿಗಾರ ಪ್ರಣಬ್ ಕುಮಾರ್ ದಾಸ್ ಅವರೊಂದಿಗೆ ವಿಶೇಷ ದೂರವಾಣಿ ಸಂದರ್ಶನದಲ್ಲಿ ಸಿಂಗ್ ಅವರು ಮಾತನಾಡಿದರು.
ಮೇ 3 ರಂದು ಬುಡಕಟ್ಟು ಮತ್ತು ಬಹುಸಂಖ್ಯಾತ ಮೈತೇಯಿ ಸಮುದಾಯದ ಸದಸ್ಯರ ನಡುವೆ ಮೀಸಲಾತಿ ವಿಚಾರಕ್ಕೆ ಸಂಧಿಸಿದಂತೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದವು. 23 ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ. ಘರ್ಷಣೆಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. 200 ಗಾಯಗೊಂಡಿದ್ದಾರೆ ಹಾಗೂ 5 ಸಾವಿರ ಜನರು ಇನ್ನೂ ಅಸುರಕ್ಷಿತ ವಲಯದಲ್ಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೇಜ್ರಿವಾಲ್ ಬಂಗಲೆ ವಿವಾದ: ಅಜಯ್ ಮಾಕೆನ್ ದೂರಿನ ಬಗ್ಗೆ 7 ದಿನಗಳಲ್ಲಿ ವರದಿ ಕೇಳಿದ ಎಲ್‌ಜಿ
ಎಂಪಿಸಿಸಿಯಿಂದ ಮಣಿಪುರ ರಾಜ್ಯಪಾಲರನ್ನು ಭೇಟಿ: ''ಇನ್ನೂ 1000ಕ್ಕಿಂತ ಹೆಚ್ಚು ನಿರಾಶ್ರಿತರಾದ ಮೈತೇಯಿ ಮತ್ತು ಕುಕಿ ಜನರನ್ನು ಮೋರೆ ಬಳಿ ಅಸ್ಸೋಂ ರೈಫಲ್ಸ್ ರಕ್ಷಿಸಿದೆ ಎಂದು ಮೇಘಚಂದ್ರ ಹೇಳಿದರು. ಆದರೆ, ರಾಜ್ಯ ಸರ್ಕಾರ ಅವರಿಗೆ ಇನ್ನೂ ಏನನ್ನೂ ಮಾಡಿಲ್ಲ. ಇಡೀ ಮಣಿಪುರದಲ್ಲಿ ನಡೆದ ಹಿಂಸಾಚಾರದ ನಂತರ, ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಕೇಂದ್ರ ಸರ್ಕಾರವು 355ನೇ ವಿಧಿಯನ್ನು ಜಾರಿಗೆ ತಂದಿದೆ. ಅದು ಸಂಪೂರ್ಣವಾಗಿ ಕಾಗದಗಳಲ್ಲಿದೆ ಎಂದು ಹೇಳಿದರು. ಇಂಫಾಲ್ ನಗರದ ಹೊರಗಿನ ವಿವಿಧ ಸ್ಥಳಗಳಲ್ಲಿ, ವಿಶೇಷವಾಗಿ ಇಂಫಾಲ್ ಚುರಾಚಂದ್‌ಪುರ, ಮೋರೆ ಗಡಿ ಪ್ರದೇಶ ಮತ್ತು ಹತ್ತಿರದ ಪ್ರದೇಶಗಳಲ್ಲಿ ಇನ್ನೂ ಉದ್ವಿಗ್ನತೆ ಇದೆ. ಎಂಪಿಸಿಸಿ ಮಣಿಪುರ ರಾಜ್ಯಪಾಲರನ್ನು ಭೇಟಿ ಮಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಮನವಿ ಪತ್ರ ಸಲ್ಲಿಸಿದೆ'' ಎಂದು ಕೆ. ಮೇಘಚಂದ್ರ ಸಿಂಗ್ ತಿಳಿಸಿದರು.