ಔರಂಗಾಬಾದ್(ಮಹಾರಾಷ್ಟ್ರ): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದಿನನಿತ್ಯದ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನರೂ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಔರಂಗಾಬಾದ್ನಲ್ಲಿ ವ್ಯಕ್ತಿಯೋರ್ವ ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಬೈಕ್ನ ಬದಲಿಗೆ ಕುದುರೆಯನ್ನು ಬಳಸುತ್ತಿದ್ದಾರೆ.
ಹೌದು, ಯೂಸೂಫ್ ಶೇಖ್ ಎಂಬಾತ ಕೆಲಸಕ್ಕೆ ಹೋಗಲು ಮತ್ತು ಕೆಲಸದಿಂದ ಹಿಂದಿರುಗಲು ಕುದುರೆಯನ್ನು ಬಳಸುತ್ತಿದ್ದಾರೆ. ದಿನಕ್ಕೆ ಸುಮಾರು 30 ಕಿಲೋಮೀಟರ್ ಅನ್ನು ಯೂಸೂಫ್ ಶೇಖ್ ಕ್ರಮಿಸಲು ಕುದುರೆ ಬಳಸುತ್ತಿದ್ದಾರೆ. ಯೂಸೂಫ್ ಶೇಖ್ ಬಳಿ ಇದ್ದ ಬೈಕ್ ತುಂಬಾ ಹಳೆಯದಾಗಿದ್ದು, ಹೆಚ್ಚು ಪೆಟ್ರೋಲ್ ಹಾಕಬೇಕಾಗಿತ್ತು. ಹಾಗಾಗಿ ಆತ ಕುದುರೆಯನ್ನು ಬಳಸಲು ಮುಂದಾಗುತ್ತಾರೆ. ಕಳೆದ ಐದಾರು ತಿಂಗಳಿಂದ ಯೂಸೂಫ್ ಕುದುರೆಯನ್ನು ಬಳಸುತ್ತಿದ್ದು, ಕೆಲಸ ಮಾಡುವ ಸ್ಥಳಕ್ಕೆ ಮಾತ್ರವಲ್ಲದೇ ಕುಟುಂಬದ ಕಾರ್ಯಕ್ರಮಗಳಿಗೂ ಕುದುರೆ ಬಳಸುತ್ತಿದ್ದಾರೆ.