ಹರಿದ್ವಾರ (ಉತ್ತರಾಖಂಡ):ವ್ಯಕ್ತಿಯೊಬ್ಬ ಬಾಲಕಿಯನ್ನು ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ. ಸಂತ್ರಸ್ತೆ ಮೂಲತಃ ಬಿಹಾರದ ರೋಹ್ತಾಸ್ ಜಿಲ್ಲೆಯವಳಾಗಿದ್ದು, ಹರಿದ್ವಾರದ ಸಿದ್ಕುಲ್ ಪ್ರದೇಶದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಪ್ರದೇಶದಲ್ಲಿ ಬಾಡಿಗೆಗಿದ್ದ ವ್ಯಕ್ತಿ ಈ ದುಷ್ಕೃತ್ಯ ಎಸಗಿದ್ದಾನೆ.
ನಾನು ಬಾಡಿಗೆಗಿದ್ದ ಮನೆಯ ಪಕ್ಕದಲ್ಲೇ ರಾಜಕುಮಾರ ಎಂಬಾತನೂ ವಾಸವಾಗಿದ್ದ. ನಾನು ಆತನನ್ನು ಅಂಕಲ್ ಎಂದು ಕರೆಯುತ್ತಿದ್ದೆ. ಒಂದಿನ ಆರೋಪಿ ಸ್ನೇಹಿತನ ವಾಹನ ತೆಗೆದುಕೊಂಡು ಬಂದು ಹೊರಗಡೆ ಸುತ್ತಾಡಲು ಹೋಗೋಣ ಬಾ ಎಂದು ಹೇಳಿ ನನ್ನನ್ನು ಕರೆದುಕೊಂಡು ಹೋಗಿದ್ದಾನೆ. ಹೀಗೆ, ಯುಪಿಯ ಸಹರಾನ್‌ಪುರ ಜಿಲ್ಲೆಗೆ ಕರೆದೊಯ್ದಿದ್ದಾನ.
ಈ ಸ್ಥಳದಲ್ಲಿ ಆತ ಬಾಲಕಿಯನ್ನು ನೀತು ಗುರ್ಜರ್ ಎಂಬ ವ್ಯಕ್ತಿಗೆ 2 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಇದಾದ ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಅಲ್ಲಿ ಹಿಂದೂ ಪದ್ಧತಿಯಂತೆ ಮದುವೆ ಮಾಡಿದ್ದಾರೆ. ಇದಾದ ಮೇಲೆ ಒತ್ತೆಯಾಳಾಗಿಟ್ಟುಕೊಂಡು ಸತತ ಎರಡು ತಿಂಗಳ ಕಾಲ ಅತ್ಯಾಚಾರ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಬಾಲಕಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿದ್ದಾಳೆ.
ಇದನ್ನೂ ಓದಿ:ಅಕ್ರಮ ಸಂಬಂಧಕ್ಕೆ ಜಗಳ; ಗಂಡನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪತ್ನಿ
ಹರಿದ್ವಾರದ ಸಿಡುಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಪೊಲೀಸರು ಬಾಲಕಿಯ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದಾದ ನಂತರ ಡೆಹ್ರಾಡೂನ್ಗೆ ಹೋಗಿ ಡಿಐಜಿಗೆ ದೂರು ನೀಡಿದ್ದಾಳೆ. ಡಿಐಜಿ ಸೂಚನೆಯ ಮೇರೆಗೆ ಸಿಡುಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ತನಿಖೆ ನಡೆಯುತ್ತಿದೆ.