ಪಿಲಿಭಿತ್ (ಉತ್ತರಪ್ರದೇಶ):ಊಟದಲ್ಲಿ ತಲೆಕೂದಲು ಬಂತೆಂದು ವ್ಯಗ್ರನಾದ ಪತಿಯೊಬ್ಬ ತನ್ನ ಹೆತ್ತವರೊಂದಿಗೆ ಸೇರಿಕೊಂಡು ಪತ್ನಿಯನ್ನು ಥಳಿಸಿ, ಕೇಶಮುಂಡನ ಮಾಡಿದ್ದಾನೆ. ಈ ಘಟನೆ ಉತ್ತರಪ್ರದೇಶದಲ್ಲಿ ನಡೆಯಿತು. ಮಹಿಳೆ ನೀಡಿದ ದೂರಿನ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೀಮಾದೇವಿ ಹಲ್ಲೆಗೊಳಗಾದ ಮಹಿಳೆ. ಜಹೀರುದ್ದೀನ್ ಬಂಧಿತ ಆರೋಪಿ. ಪತ್ನಿ ಶನಿವಾರ ರಾತ್ರಿ ಅಡುಗೆ ಮಾಡಿ ಪತಿ, ಅತ್ತೆ, ಮಾವಂದಿರಿಗೆ ಊಟ ಬಡಿಸಿದ್ದಾಳೆ. ಈ ವೇಳೆ ಗಂಡನ ತಟ್ಟೆಯಲ್ಲಿ ಕೂದಲು ಬಂದಿದೆ. ಇಷ್ಟಕ್ಕೆ ಕೋಪಗೊಂಡ ಆತ ಪತ್ನಿಯನ್ನು ಥಳಿಸಿದ್ದಾನೆ. ಇದಕ್ಕೆ ಕುಟುಂಬಸ್ಥರೂ ಸಾಥ್ ನೀಡಿದ್ದಾರೆ. ಬಳಿಕ ಆಕೆಯ ಕೇಶಮುಂಡನ ಮಾಡಿ ದೌರ್ಜನ್ಯ ಎಸಗಿದ್ದಾನೆ.