ಕರ್ನಾಟಕ

karnataka

ETV Bharat / bharat

ಇನ್ವರ್ಟರ್​ ಬದಲಿಗೆ ಸಿಕ್ತು 5 ಕೆಜಿ ಕಲ್ಲು : ಅನಂತಪುರದ ಕೈಮಗ್ಗ ಉದ್ಯಮಿಗೆ ಅಮೆಜಾನ್​ನಿಂದ ಮಹಾಮೋಸ

ಈಗಾಗಲೇ ಆ ವ್ಯಕ್ತಿ ಆನ್‌ಲೈನ್​ ಮೂಲಕ ಅಮೆಜಾನ್ ಕಾರ್ಯನಿರ್ವಾಹಕರಿಗೆ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೋಸದ ಜಾಲವನ್ನು ಬೆಳಕಿಗೆ ತರಲಾಗುವುದು ಎಂಬ ಉತ್ತರವನ್ನು ನೀಡಿದ್ದಾರೆ. ಕಾರ್ಯನಿರ್ವಾಹಕರ ಪ್ರಕಾರ ಗ್ರಾಹಕರಿಗೆ ಮೋಸವಾಗಿದ್ದು, ನಿಜವಾದಲ್ಲಿ ಖರ್ಚಾದ ಎಲ್ಲಾ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಹಿಂದಿರುಗಿಸಲಾಗುತ್ತದೆ..

5-kg-stone
5 ಕೆ ಜಿ ಕಲ್ಲು

By

Published : Jun 13, 2021, 5:46 PM IST

ಆಂಧ್ರಪ್ರದೇಶ(ಅನಂತಪುರ) :ಕೊರೊನಾ ವೈರಸ್ ಹೆಚ್ಚಳಗೊಂಡ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನ ಆನ್​ಲೈನ್​ನಲ್ಲಿ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಹೀಗೆ ಆಸಕ್ತಿಯಿಂದ ಕೊಂಡುಕೊಳ್ಳುವ ಯಾವುದೇ ವಸ್ತುವು ಗುಣಮಟ್ಟದ್ದಾಗಿರಲಿ ಎಂಬುವುದು ಜನರ ಅಭಿಲಾಷೆ. ಆದರೆ, ಇದಕ್ಕೆ ತೀರಾ ವ್ಯತಿರಿಕ್ತವೆಂಬಂತೆ ಕೈಮಗ್ಗ ಉದ್ಯಮಿಯೊಬ್ಬರು ಅಮೆಜಾನ್​ನಲ್ಲಿ ಇನ್ವರ್ಟರ್​ನ ಆರ್ಡರ್​ ಮಾಡಿ ಶಾಕ್​ಗೆ ಒಳಗಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ.

ಇನ್ವರ್ಟರ್​ ಬದಲಿಗೆ 5 ಕೆಜಿ ಕಲ್ಲನ್ನು ವಿತರಣೆ ಮಾಡಿರುವುದು

ಹೀಗೆ ಅಮೆಜಾನ್​ನಿಂದ ವಸ್ತುವನ್ನು ಪಡೆದ ವ್ಯಕ್ತಿ ಉತ್ಸಾಹದಿಂದ ಪ್ಯಾಕೇಟ್​ ತೆರೆದು ಅಸಮಾಧಾನಕ್ಕೆ ಒಳಗಾಗಿದ್ದಾರೆ. ಕಾರಣ ಅದರಲ್ಲಿ ಇನ್ವರ್ಟರ್​ ಬದಲಿಗೆ ಸುಮಾರು 5 ಕೆಜಿ ಗಾತ್ರದ ಕಲ್ಲು ತುಂಬಲಾಗಿತ್ತು. ಇನ್ವರ್ಟರ್ ಪೆಟ್ಟಿಗೆಯೊಳಗಿನ ವಿದ್ಯುತ್ ಸರ್ಕ್ಯೂಟ್‌ಗಳು ಮತ್ತು ಬೋರ್ಡ್‌ಗಳ ಸ್ಥಳದಲ್ಲಿ ಕಲ್ಲನ್ನು ಇಟ್ಟು ಕಳುಹಿಸಿದ್ದನ್ನು ಕಂಡ ಗ್ರಾಹಕ ತೀರಾ ಅಸಮಾಧಾನಕ್ಕೆ ಒಳಗಾಗಿದ್ದಾನೆ.

ಈಗಾಗಲೇ ಆ ವ್ಯಕ್ತಿ ಆನ್‌ಲೈನ್​ ಮೂಲಕ ಅಮೆಜಾನ್ ಕಾರ್ಯನಿರ್ವಾಹಕರಿಗೆ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೋಸದ ಜಾಲವನ್ನು ಬೆಳಕಿಗೆ ತರಲಾಗುವುದು ಎಂಬ ಉತ್ತರವನ್ನು ನೀಡಿದ್ದಾರೆ. ಕಾರ್ಯನಿರ್ವಾಹಕರ ಪ್ರಕಾರ ಗ್ರಾಹಕರಿಗೆ ಮೋಸವಾಗಿದ್ದು, ನಿಜವಾದಲ್ಲಿ ಖರ್ಚಾದ ಎಲ್ಲಾ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಹಿಂದಿರುಗಿಸಲಾಗುತ್ತದೆ ಎಂದಿದ್ದಾರೆ.

ಓದಿ:ನೀವ್ ಲಸಿಕೆ ಹಾಕಿಸಿಕೊಂಡ್ರಾ, 20 ಕೆಜಿ ಅಕ್ಕಿ ಕೊಡ್ತಾರಂತೆ ನೋಡಿ ಇಲ್ಲಿ..

ABOUT THE AUTHOR

...view details