ಪತ್ತನಂತಿಟ್ಟ(ಕೇರಳ):ತನ್ನ ಮಗಳ ಮೇಲೆಯೇ ಮೂರು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಮೂರು ಜೀವಾವಧಿ ಶಿಕ್ಷೆಗಳನ್ನು ವಿಧಿಸಿ, ವಿಶೇಷ ಪೊಕ್ಸೊ ಕೋರ್ಟ್ ಆದೇಶ ಹೊರಡಿಸಿದೆ.
ಕೇರಳದ ಪತ್ತನಂತಿಟ್ಟದ ವೆಚೂಚಿರಾದ ಮೂಲದ ವ್ಯಕ್ತಿ 2016ರಿಂದ ಸತತ ಮೂರು ವರ್ಷಗಳ ಕಾಲ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ಗುರುವಾರ ಮೂರು ಜೀವಾವಧಿ ಶಿಕ್ಷೆಗಳ ತೀರ್ಪು ನೀಡಿ, ಆದೇಶ ಹೊರಡಿಸಿದೆ. ಈ ಪ್ರಕರಣ ತುಂಬಾ ಕ್ರೂರ ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.