ನಾಗ್ಪುರ( ಮಹಾರಾಷ್ಟ್ರ) : ಅತ್ಯಾಚಾರಗಳು ಆಘಾತಕಾರಿ ಅಪರಾಧವಾಗಿ ಉಳಿದಿರುವ ಇಂದಿನ ಕಾಲದಲ್ಲಿ ತೆಲಂಗಾಣದ ಇಬ್ಬರು ಹೆಣ್ಣುಮಕ್ಕಳ ತಂದೆ ದೇಶದಲ್ಲಿ ನಡೆಯುತ್ತಿರುವ ಲೈಂಗಿಕ ಅಪರಾಧಗಳ ಕ್ರೌರ್ಯದ ಬಗ್ಗೆ ತಮ್ಮ ಕಳವಳವನ್ನು ಭಾರತದ ಘನತೆವೆತ್ತ ರಾಷ್ಟ್ರಪತಿಗಳಿಗೆ ತಲುಪಿಸಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ಕೆ ಅವರು ಬೈಸಿಕಲ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲೇ ಸಂಚರಿಸಿ ರಾಷ್ಟ್ರಪತಿಗಳನ್ನು ಭೇಟಿಯಾಗುವ ಆಶಯ ಹೊಂದಿದ್ದಾರೆ. ಇವರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಕೆಲವು ಇತ್ತೀಚಿನ ಘಟನೆಗಳು ಋಷಿಕೇಶ್ವರ್ ರಾಜು ಅವರಿಗೆ ತೀವ್ರ ಪರಿಣಾಮ ಬೀರಿ ಅವರಲ್ಲಿ ಬದಲಾವಣೆ ಉಂಟು ಮಾಡಿದೆಯಂತೆ. ಅವರು ಬೈಸಿಕಲ್‌ನಲ್ಲಿ ಸುಮಾರು 2,000 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಹೊರಟಿದ್ದಾರೆ. ಇನ್ನು ಅತ್ಯಾಚಾರಿಗಳು ಮತ್ತು ಲೈಂಗಿಕ ಕಿರುಕುಳಗಾರರಿಗೆ ಕಡ್ಡಾಯ ಶಿಕ್ಷೆಯಾಗಿ ಎನ್‌ಕೌಂಟರ್ ಅಥವಾ ಮರಣದಂಡನೆ ವಿಧಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ:ಮದುವೆ ಆಮಂತ್ರಣ ನೀಡಲು ಹೋದವನ ಮೇಲೆ ಬಿದ್ದ ತೆಂಗಿನ ಮರ: ವ್ಯಕ್ತಿ ಸ್ಥಳದಲ್ಲೇ ಸಾವು