ಕೋಲ್ಕತ್ತಾ:ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಕಾನೂನು ಸಚಿವ ಮೊಲೊಯ್ ಘಟಕ್ ಹೈಕೋರ್ಟ್ಗೆ ಅಫಿಡವಿಟ್ಗಾಗಿ ನೂತನ ಅರ್ಜಿ ಸಲ್ಲಿಸಿದ್ದಾರೆ.
ನಾರದಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಫಿಡವಿಟ್ಗಳನ್ನು ಸ್ವೀಕರಿಸುವಂತೆ ಸುಪ್ರೀಂಕೋರ್ಟ್, ಕೋಲ್ಕತ್ತಾ ಹೈಕೋರ್ಟ್ಗೆ ಸೂಚಿಸಿತ್ತು. ಜೂನ್ 9 ರಂದು ಕೋಲ್ಕತ್ತಾ ಹೈಕೋರ್ಟ್ ಮಮತಾ ಬ್ಯಾನರ್ಜಿ ಹಾಗೂ ಮೊಲೊಯ್ ಘಟಕ್ ಅವರ ಅಫಿಡವಿಟ್ಗಳನ್ನು ಸ್ವೀಕರಿಸಲು ನಿರಾಕರಿಸಿತ್ತು.
ಜೂನ್ 25 ರಂದು ಸಿಬಿಐನ ವರ್ಗಾವಣೆ ಅರ್ಜಿ ನಿರ್ಧರಿಸುವ ಮೊದಲು ಬ್ಯಾನರ್ಜಿ, ಘಟಕ್ ಮತ್ತು ರಾಜ್ಯ ಸರ್ಕಾರದ ಮನವಿಯನ್ನು ಹೊಸದಾಗಿ ತೀರ್ಮಾನಿಸಬೇಕೆಂದು ಸುಪ್ರೀಂ ಸೂಚಿಸಿತ್ತು.
ಇದನ್ನೂ ಓದಿ:'ಎಲ್ಲವೂ ಶೀಘ್ರವೇ ಬಗೆಹರಿಯಲಿದೆ': Tweet ಮಾಡಿ ಭರವಸೆ ನೀಡಿದ Poona Walla!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 17 ರಂದು ನಾಲ್ವರು ಟಿಎಂಸಿ ನಾಯಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಮುಖಂಡರನ್ನು ಬಂಧಿಸಿದ ನಂತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಟಿಎಂಸಿ ಅಡ್ಡಿಪಡಿಸಿದೆ ಎಂದು ಸಿಬಿಐ ಆರೋಪಿಸಿದೆ.