ಕರ್ನಾಟಕ

karnataka

ETV Bharat / bharat

ಎನ್​ಸಿಟಿ ಮಸೂದೆ ವಿಚಾರಕ್ಕೆ ದೆಹಲಿ ಸಿಎಂಗೆ ಪತ್ರ ಬರೆದ ಮಮತಾ..ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ - ಎನ್​ಸಿಟಿ ಮಸೂದೆ ವಿಚಾರಕ್ಕೆ ದೆಹಲಿ ಸಿಎಂಗೆ ಪತ್ರ ಬರೆದ ಮಮತಾ

ಎನ್‌ಸಿಟಿ ಮಸೂದೆಯ ವಿರುದ್ಧದ 'ಹೋರಾಟ' ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೆಹಲಿ ಸಿಎಂ ಕೇಜ್ರಿವಾಲ್‌ಗೆ ಪತ್ರ ಬರೆದು ಬೆಂಬಲ ನೀಡುವುದಾಗಿ ಹೇಳಿದ್ದಾರೆ.

Mamata-Kejriwal-NCT  surgical strike on federal structure  Mamata extends support to Kejriwal  Bill  ಅರವಿಂದ್​ ಕೇಜ್ರಿವಾಲ್​ ಕೇಂದ್ರ ಸರ್ಕಾರ  ಎನ್​ಸಿಟಿ ಮಸೂದೆ ವಿಚಾರಕ್ಕೆ ದೆಹಲಿ ಸಿಎಂಗೆ ಪತ್ರ ಬರೆದ ಮಮತಾ  ಎನ್​ಸಿಟಿ ಮಸೂದೆ ವಿಚಾರಕ್ಕೆ ದೆಹಲಿ ಸಿಎಂಗೆ ಪತ್ರ ಬರೆದ ಮಮತಾ ಸುದ್ದಿ
ಎನ್​ಸಿಟಿ ಮಸೂದೆ ವಿಚಾರಕ್ಕೆ ದೆಹಲಿ ಸಿಎಂಗೆ ಪತ್ರ ಬರೆದ ಮಮತಾ

By

Published : Mar 19, 2021, 12:51 PM IST

ನವದೆಹಲಿ : ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ ವಿರುದ್ಧದ ತಮ್ಮ 'ಹೋರಾಟ'ಕ್ಕೆ ನಮ್ಮ ಬೆಂಬಲವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಅವರಿಗೆ​ ಪತ್ರ ಬರೆದಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರವು ಲೋಕಸಭೆಯಲ್ಲಿ ಪರಿಚಯಿಸಿರುವ 2021 ರ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ, ಭಾರತೀಯ ಗಣರಾಜ್ಯದ ಸಂಯುಕ್ತ ರಚನೆಯ ಮೇಲೆ ‘ಸರ್ಜಿಕಲ್​ ಸ್ಟ್ರೈಕ್​’ ನಡೆಸಿದ್ದಾರೆ ಎಂದು ಮಮತಾ ಪತ್ರದ ಮೂಲಕ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಕೈಯಲ್ಲಿ ಬಳಲುತ್ತಿರುವ ಬಿಜೆಪಿ ಪ್ರಾಕ್ಸಿ ಮೂಲಕ ದೆಹಲಿಯನ್ನು ಆಳಲು ಬಯಸಿದೆ ಎಂದು ಬ್ಯಾನರ್ಜಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಕೈಯಲ್ಲಿ ಬಿಜೆಪಿ ಅನುಭವಿಸಿದ ಅವಮಾನಕರ ಸೋಲನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ಮರೆತಿಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಪ್ರಾಕ್ಸಿ ಮೂಲಕ ದೆಹಲಿಯನ್ನು ಆಳಲು ಅವರು ಬಯಸುತ್ತಿದ್ದಾರೆ. ಜಿಎನ್‌ಸಿಟಿಡಿ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಗಳ ನಿಜವಾದ ಉದ್ದೇಶವಾಗಿದೆ ಎಂದು ಮಮತಾ ಆರೋಪಿಸಿದ್ದಾರೆ.

ಮಮತಾ ಪತ್ರಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ‘ದೆಹಲಿಯ ಜನರಿಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ. ಈ ಮಸೂದೆಯನ್ನು ಕೇಂದ್ರ ಸರ್ಕಾರವು ಮಾರ್ಚ್ 15 ರಂದು ಲೋಕಸಭೆಯಲ್ಲಿ ಮಂಡಿಸಿತ್ತು.

ABOUT THE AUTHOR

...view details