ಕೋಲ್ಕತ್ತಾ (ಪಶ್ಚಿಮ ಬಂಗಾಳ):ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನ ಎಂದು ಘೋಷಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇವಲ ಪ್ರತಿಮೆಯನ್ನು ಸ್ಥಾಪನೆ ಮಾಡುವುದರಿಂದ ನೇತಾಜಿ ಅವರ ಮೇಲೆ ಪ್ರೀತಿಯನ್ನು ತೋರಿದಂತಾಗುವುದಿಲ್ಲ. ಪ್ರತಿಮೆ ಸ್ಥಾಪನೆಯಿಂದ ಅವರ ಅಂತರ್ಗತ ರಾಜಕೀಯದ ಸಿದ್ಧಾಂತ ಪ್ರತಿಬಿಂಬಿಸುವುದಿಲ್ಲ ಎಂದು ಕೋಲ್ಕತ್ತಾದ ರೆಡ್ ರೋಡ್ನಲ್ಲಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೀದಿ ಹೇಳಿದರು.
ಸರಣಿ ಟ್ವೀಟ್ಗಳನ್ನು ಮಾಡಿರುವ ಸಿಎಂ ಮಮತಾ, "ದೇಶನಾಯಕ್ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನಮನಗಳು. ಅವರು ರಾಷ್ಟ್ರೀಯ ಮತ್ತು ಜಾಗತಿಕ ಐಕಾನ್. ಬಂಗಾಳದಿಂದ ನೇತಾಜಿ ಅವರ ಉದಯವಾಗಿ ಭಾರತೀಯ ಇತಿಹಾಸದಲ್ಲಿ ಅವರಿಗೆ ಸರಿ ಸಾಟಿಯಿಲ್ಲ" ಎಂದು ಹೇಳಿದ್ದಾರೆ.