ನವದೆಹಲಿ: ಮಾನ್ಸೂನ್ ಅಧಿವೇಶನ ಸಂದರ್ಭ ಉಭಯ ಸದನದಲ್ಲಿ ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ವಾಗ್ಬಾಣ ಮುಂದುವರೆಸಿವೆ. ಇಂದು ನಡೆದ ರಾಜ್ಯಸಭೆ ಕಲಾಪ ಆರಂಭಕ್ಕೂ ಮುನ್ನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಮಾತ್ರವಲ್ಲದೇ ಆಸಕ್ತ ವಿವಿಧ ಪಕ್ಷದ ನಾಯಕರು ಸಹ ಭಾಗಿಯಾಗಿದ್ದರು. ಕಲಾಪದ ವೇಳೆ ಚರ್ಚೆ ಆಗಬೇಕಾದ ವಿಚಾರಗಳ ಕುರಿತು ಸಭೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಕೃಷಿ ಕಾಯ್ದೆ, ಪೆಗಾಸಸ್ ವಿವಾದ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದ್ದು, ಕಲಾಪದಲ್ಲಿ ಈ ಕುರಿತ ಚರ್ಚೆಗೆ ಹಾಗೂ ವಿವಿಧ ವಿಚಾರಗಳ ಬಗ್ಗೆಯೂ ಮಾತುಕತೆ ನಡೆದಿದೆ. ಇದಕ್ಕೂ ಮೊದಲು 14 ಪಕ್ಷದ ನಾಯಕರು ಸಹ ದೆಹಲಿಯಲ್ಲಿ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದರು.