ಕರ್ನಾಟಕ

karnataka

ETV Bharat / bharat

ಗುಂಡು ಹಾರಿಸಿಕೊಂಡು ಕಾಂಗ್ರೆಸ್​ ಎಂಎಲ್​ಎ ಮಗ ಆತ್ಮಹತ್ಯೆಗೆ ಶರಣು - ಮಧ್ಯ ಪ್ರದೇಶದ ಕಾಂಗ್ರೆಸ್​ ಎಂಎಲ್​ಎ ಮಗ ಆತ್ಮಹತ್ಯೆ. ಕಾಂಗ್ರೆಸ್​ ಎಂಎಲ್​ಎ ಸಂಜಯ್ ಯಾದವ್​ ಮಗ ವೈಭವ್​ ಆತ್ಮಹತ್ಯೆ

ಕಾಂಗ್ರೆಸ್​ ಎಂಎಲ್​ಎ(MLA) ಸಂಜಯ್​ ಯಾದವ್​ ಅವರ 16 ವರ್ಷದ ಮಗ ವೈಭವ್​​ ರಿವಾಲ್ವರ್​ನಿಂದ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ 12ನೇ ತರಗತಿ ಓದುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್​ ಎಂಎಲ್​ಎ ಮಗ ಆತ್ಮಹತ್ಯೆಗೆ ಶರಣು
ಕಾಂಗ್ರೆಸ್​ ಎಂಎಲ್​ಎ ಮಗ ಆತ್ಮಹತ್ಯೆಗೆ ಶರಣು

By

Published : Nov 12, 2021, 6:24 AM IST

ಭೋಪಾಲ್/ಜಬಲ್​ಪುರ್​: ಮಧ್ಯಪ್ರದೇಶದ ಕಾಂಗ್ರೆಸ್​ ಎಂಎಲ್​ಎ ಮಗ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಕಾಂಗ್ರೆಸ್​ ಎಂಎಲ್​ಎ(MLA) ಸಂಜಯ್​ ಯಾದವ್​ ಅವರ 16 ವರ್ಷದ ಮಗ ವೈಭವ್​​ ರಿವಾಲ್ವರ್​ನಿಂದ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ 12ನೇ ತರಗತಿ ಓದುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದೆ. ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ವೈದ್ಯರು ಕೆಲವೇ ಕ್ಷಣಗಳಲ್ಲಿ ವೈಭವ್​ ಕೊನೆಯ ಕೊನೆಯುಸಿರೆಳೆದಿದ್ದಾನೆ ಎಂದು ಮಾಹಿತಿ ನೀಡಿದರು. ಆತ ವಾಷ್​ರೂಮ್​ನಲ್ಲಿ ಶೂಟ್​ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಜಬಲ್​ಪುರ್ ಎಸ್​ಪಿ ಸಿದ್ಧಾರ್ಥ್​ ಬಹುಗುಣ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಖಚಿತಪಡಿಸಿದ್ದು, ಯಾವ ಕಾರಣಕ್ಕೆ ಎಂಬುದನ್ನು ವಿಚಾರಣೆ ಮಾಡುತ್ತಿದ್ದೇವೆ. ಪೊಲೀಸರಿಗೆ ಪತ್ರ ದೊರೆಕಿದ್ದು, ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ವೈಭವ್​ ಬರೆದುಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಕೋರ್ಟ್​ನೊಳಗೆ ದೆಹಲಿ ಬಾರ್ ಅಸೋಸಿಯೇಷನ್ ​​ನೌಕರ ಶವವಾಗಿ ಪತ್ತೆ

ABOUT THE AUTHOR

...view details