ಕರ್ನಾಟಕ

karnataka

By

Published : Jan 4, 2022, 3:00 PM IST

ETV Bharat / bharat

ಮಧುಬಾಲಾ ಖ್ಯಾತಿಯ ನಟಿ ದೃಷ್ಟಿ ಧಮಿಲಾಗೆ ವಕ್ಕರಿಸಿದ ಕೊರೊನಾ

ಬಾಲಿವುಡ್​ನಲ್ಲಿ ಹಲವಾರು ನಟ-ನಟಿಯರು ಕೊರೊನಾಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಈಗ ಮತ್ತೊಬ್ಬ ನಟಿ ದೃಷ್ಟಿ ಧಾಮಿಗೂ ಕೊರೊನಾ ದೃಢಪಟ್ಟಿದೆ.

ಮಧುಬಾಲಾ ಖ್ಯಾತಿಯ ನಟಿ ದೃಷ್ಟಿ ಧಮಿಲಾಗೆ ಕೊರೊನಾ
ಮಧುಬಾಲಾ ಖ್ಯಾತಿಯ ನಟಿ ದೃಷ್ಟಿ ಧಮಿಲಾಗೆ ಕೊರೊನಾ

ಮುಂಬೈ: ಮಧುಬಾಲಾ ಖ್ಯಾತಿಯ ನಟಿ ದೃಷ್ಟಿ ಧಾಮಿ ಅವರು ಕೊರೊನಾಗೆ ತುತ್ತಾಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರು ಮಾಹಿತಿ ನೀಡಿದ್ದಾರೆ.

ನಟಿಯ ಪೋಸ್ಟ್ ಗೆ ಬಾಲಿವುಡ್​​ನ ಕರಣ್ ಗ್ರೋವರ್, ಅರಿಜಿತ್ ತನೇಜಾ, ಡಿನೋ ಮೋರಿಯಾ ಸೇರಿದಂತೆ ಮುಂತಾದ ಸೆಲೆಬ್ರಿಟಿಗಳು ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ. ಇಲ್ಲಿಯವರೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕೊರೊನಾಗೆ ತುತ್ತಾಗಿದ್ದಾರೆ. ಈ ನಡುವೆ ಈಗ ಧಮಿಲಾಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ.

ಮಧುಬಾಲಾ ಖ್ಯಾತಿಯ ನಟಿ ದೃಷ್ಟಿ ಧಮಿಲಾಗೆ ಕೊರೊನಾ

ಇದನ್ನೂ ಓದಿ: ಹೊಸ ಐಷಾರಾಮಿ ಮನೆಗೆ ಶಿಫ್ಟ್ ಆದ ಕತ್ರಿನಾ ; ಗಮನ ಸೆಳೆದ ನಟಿಯ ವಜ್ರದ ಹೊದಿಕೆಯ ಮಂಗಳಸೂತ್ರ

ಅದೃಷ್ಟವಶಾತ್ ನನಗೆ ಗಂಭೀರವಾದ ಕೊರೊನಾ ಸಮಸ್ಯೆ ಇಲ್ಲ. ನಾನು ಈ ಹೂವುಗಳ ವಾಸನೆ ಮತ್ತು ಚಾಕೊಲೇಟ್ ಅನ್ನು ಆಸ್ವಾದಿಸಬಹುದು ಎಂದು ಈ ಸಂಬಂಧ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನಟಿ ದೃಷ್ಟಿ ಧಾಮಿ ಅವರು 'ಮಧುಬಾಲಾ ಏಕ್ ಇಷ್ಕ್ ಏಕ್ ಜುನೂನ್', 'ಏಕ್ ಥಾ ರಾಜಾ ಏಕ್ ಥಿ ರಾಣಿ' ಮತ್ತು 'ಸಿಲ್ಸಿಲಾ ಬದಲ್ತೆ ರಿಶ್ಟನ್ ಕಾ' ನಂತಹ ಟಿವಿ ಶೋಗಳಲ್ಲಿನ ಪಾತ್ರದಲ್ಲಿ ನಟಿಸಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ.

ABOUT THE AUTHOR

...view details