ಹೈದರಾಬಾದ್: ಉದ್ದ ಕುತ್ತಿಗೆಯುಳ್ಳ ಶ್ವಾನದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜಿರಾಫೆ ಅಥವಾ ಡೈನೋಸರಸ್ನ ಕುತ್ತಿಗೆಯಂತೆ ಕಾಣುವ ಈ ನಾಯಿ ಸದ್ಯ ಭಾರಿ ಚರ್ಚೆಯ ವಿಷಯವಾಗಿದೆ.
long neck dog:ಬ್ರಾಡಿ ಹೆಸರಿನ ಈ ಶ್ವಾನವು ಅಜವಾಕ್ ಜಾತಿಗೆ ಸೇರಿದ್ದು, ಬೂದು ಹೌಂಡ್ ಮತ್ತು ವಿಪೆಟ್ ತಳಿಗೆ ನಿಕಟ ಸಂಬಂಧ ಹೊಂದಿದೆ. ಬ್ರಾಡಿ ಚಿಕ್ಕ ವಯಸ್ಸಿನಲ್ಲಿ (2016) ಕಾರ್ ಅಪಘಾತದಲ್ಲಿ ಗಾಯಗೊಂಡಿತ್ತು. ಆಗ ಲೂಯಿಸಾ ಕ್ರೂಕ್ ಎಂಬ ಮಹಿಳೆ ಶ್ವಾನದ ಜೀವ ಉಳಿಸಿ ನಂತರ ಅವರೇ ಬ್ರಾಡಿಯನ್ನು ಪೋಷಿಸತೊಡಗಿದರು.
ಡೈಲಿ ಸ್ಟಾರ್ ವೆಬ್ಸೈಟ್ನಲ್ಲಿ ಲೂಯಿಸಾ ಕ್ರೂಕ್ ತನ್ನ ಬ್ರಾಡಿ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಅಪಘಾತದ ಬಳಿಕ ಬ್ರಾಡಿ ಭುಜ ಸೇರಿದಂತೆ ಒಂದು ಕಾಲು ಕತ್ತರಿಸಬೇಕಾಯಿತು. ಅಜವಾಕ್ ತಳಿಯ ನಾಯಿಗಳ ಕುತ್ತಿಗೆ ಬಹಳ ಉದ್ದವಾಗಿರುತ್ತದೆ. ಬ್ರಾಡಿ ಭುಜ ಸೇರಿದಂತೆ ಒಂದು ಕಾಲನ್ನು ಕತ್ತರಿಸಿದಾಗ, ಅದರ ಕುತ್ತಿಗೆ ಇನ್ನೂ ಉದ್ದವಾಗಿ ಕಾಣುತ್ತದೆ ಎಂದು ಲೂಯಿಸಾ ಭಾವಿಸಿದ್ದರು. ಅದರಂತೆ ಇದೀಗ ನಾಯಿ ಕುತ್ತಿಗೆ ಉದ್ದವಾಗಿ ಕಾಣುತ್ತಿದೆ.
ಇದನ್ನೂ ಓದಿ:Video: ಮೃಗಾಲಯದಲ್ಲಿ ಸಿಂಹದ ಆವರಣ ಪ್ರವೇಶಿಸಿದ ಯುವಕನ ರಕ್ಷಣೆ
ಅಪಘಾತದ ಸಂದರ್ಭದಲ್ಲಿ ಶ್ವಾನ ತುಸು ಹೆಚ್ಚೇ ಗಾಯಗೊಂಡಿತ್ತು. ಆದ್ರೀಗ ಲೂಯಿಸಾ ಕ್ರೂಕ್ ಅವರ ಪ್ರೀತಿ, ಪೋಷಣೆಯಿಂದ ಆರೋಗ್ಯಕರವಾಗಿದೆ. ಲೂಯಿಸಾ ಕ್ರೂಕ್ ಅವರು ಬೇರೆ ನಾಯಿಗಳನ್ನು ಹೊಂದಿದ್ದರೂ ಕೂಡ, ಬ್ರಾಡಿ ಜೊತೆಗೆ ಒಂದು ವಿಶೇಷ ಬಾಂಧವ್ಯ ಹೊಂದಿರುವುದು ವಿಶೇಷವಾಗಿದೆ.